ದಾವಣಗೆರೆ: ಸಂಸದರಾಗಿ ಡಾ.ಪ್ರಭಾ ಮಲ್ಲಿಕಾರ್ಜುನ್ ಒಂದು ವರ್ಷ ಪೂರೈಕೆ; ಚಿತ್ರಕಲಾ ಸ್ಪರ್ಧೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಮಲ್ಲಿಕಾರ್ಜುನ್ ಡಾ.ಪ್ರಭಾ ಸಂಸದರಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಟೀಮ್ ಪ್ರಭಾ ವಿಕಾಸ್ ತಂಡದಿಂದ ದಾವಣಗೆರೆ- 2030 ನನ್ನ ಕನಸು, ನನ್ನ ನಗರ ಥೀಮ್‌ನಲ್ಲಿ ಆನ್‌ಲೈನ್ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.

ಸಾರ್ವಜನಿಕರ ದೃಷ್ಟಿಕೋನದಲ್ಲಿ ದಾವಣಗೆರೆ ಹೇಗಿರಬೇಕು ಹಾಗೂ ಅಭಿವೃದ್ಧಿ ಪಥದತ್ತ ದಾವಣಗೆರೆಹೇಗೆ ಬದಲಾಗಬೇಕು ಎಂಬುದಕ್ಕೆ ಸ್ಪರ್ಧೆಯು ನಡೆಯಲಿದೆ. ವಯೋಮಿತಿ 7-14 ವರ್ಷ, 15-20 ವರ್ಷ, 21-24 ವರ್ಷ ಹಾಗೂ 25 ವರ್ಷ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಭಾಗಿಯಾಗಬಹುದು. ಪ್ರತಿ ವಿಭಾಗದಲ್ಲಿ ಮೊದಲ ಬಹುಮಾನ 5,000 ರೂ.ಹಾಗೂ ಪ್ರಮಾಣಪತ್ರ, ಎರಡನೇ ಬಹುಮಾನ ರೂ.3,000 ಹಾಗೂ ಪ್ರಮಾಣಪತ್ರ ಒಳಗೊಂಡಿದೆ.

ಚಿತ್ರ ರಚನೆಗೆ ನಿಯಮಿತ ಪೆನ್ಸಿಲ್‌ಗಳು, ಕ್ರಯೋನ್‌ಗಳು, ಜಲವರ್ಣಗಳು, ಸ್ಕೆಚ್ ಪೆನ್ನುಗಳು,‌ಅಕ್ರಿಲಿಕ್ ಬಣ್ಣಗಳು, ಆಯಿಲ್ ಪೇಂಟ್, ಗ್ರಾಫೈಟ್ ಪೆನ್ಸಿಲ್‌ಗಳು, ಸ್ವರೂಪ ಮತ್ತು ಗಾತ್ರ ಪೇಪರ್ ಅಥವಾ ಕ್ಯಾನ್ವಾಸ್ ನಲ್ಲಿ ಚಿತ್ರ ಕಲೆ ರಚಿಸಬೇಕಿದೆ. ತಮ್ಮ
ಕಲಾಕೃತಿಯನ್ನು ಉತ್ತಮ ಗುಣಮಟ್ಟದಲ್ಲಿ ಸ್ಕ್ಯಾನ್ ಮಾಡಬೇಕು ಅಲ್ಲದೆ ಪ್ರತಿ ಸ್ಪರ್ಧಿಯು ತಮ್ಮ ಪೂರ್ಣ ಹೆಸರು, ಹುಟ್ಟಿದ
ದಿನಾಂಕ, ವಯೋಮಿತಿ, ಶಾಲೆ,ಕಾಲೇಜು ಹೆಸರು, 25 ಮೇಲ್ಪಟ್ಟರಿಗೆ ಶೈಕ್ಷಣಿಕ ಅರ್ಹತೆ, ಸಂಪರ್ಕ ಸಂಖ್ಯೆ, ಕಲಾಕೃತಿಯ ಶೀರ್ಷಿಕೆ ಯೊಂದಿಗೆ ನಿಮ್ಮ ರೇಖಾಚಿತ್ರದ ಸಂಕ್ಷಿಪ್ತ ವಿವರಣೆಯು 300 ಪದಗಳನ್ನು‌ಮೀರದಂತೆ ಇರಬೇಕು.

ಸಿದ್ಧವಾದ ಚಿತ್ರದ ಛಾಯಾಚಿತ್ರ ತೆಗೆಯಬೇಕು ಕನಿಷ್ಠ 200 ಪಿಕ್ಸೆಲ್‌ಗಳನ್ನು ಒಳಗೊಂಡ ಚಿತ್ರವನ್ನು ಇ- ಮೇಲ್‌ನಲ್ಲಿ ಸಲ್ಲಿಸಬೇಕು. ತೀರ್ಪುಗಾರರ ನಿರ್ಧಾರವು ಅಂತಿಮ ಯಾವುದೇ‌ಆಫ್‌ಲೈನ್ ಸಲ್ಲಿಕೆಗಳನ್ನು ಸ್ವೀಕರಿಸಲಾಗುವುದಿಲ್ಲ. ಸ್ಪರ್ಧಾಳುಗಳು 4ನೇ ಜೂನ್ 2025, ರಾತ್ರಿ 11:59 ಗಂಟೆಯೊಳಗೆ ಕಲಾಕೃತಿಯನ್ನು drprabhacolours-
davangere@gmail.com ಇಲ್ಲಿಗೆ ಇಮೇಲ್
ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ: 9980769117 ಸಂಪರ್ಕಿಸಲು ಟೀಮ್ ಪ್ರಭಾ ವಿಕಾಸ್ ಪ್ರಕಟಣೆಯಲ್ಲಿ ತಿಳಿಸಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *