ದಾವಣಗೆರೆ: ನಗರದ ಹೊರ ವಲಯದಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಗುರು ಪಂಡಿತ್ ಪಂಚಾಕ್ಷರ ಗವಾಯಿ ಅಂಧರ ಶಿಕ್ಷಣ ಸಮಿತಿ ವತಿಯಿಂದ ಅಂಧ ಮಕ್ಕಳ ಸಂಗೀತ ಶಾಲೆಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪದ್ಮಭೂಷಣ ಡಾ.ಪಂಚಾಕ್ಷರಿ ಪುಟ್ಟರಾಜ ಗವಾಯಿಗಳವರಿಂದ ಸ್ಥಾಪಿತವಾದ ಸಂಗೀತ ಮಹಾವಿದ್ಯಾಲಯದಲ್ಲಿ ಕಳೆದ ಸುಮಾರು 25 ವರ್ಷಗಳಿಂದ ನೂರಾರು ಅಂಧ, ಅನಾಥ ಮಕ್ಕಳು, ದೀನ ದಲಿತ ಮಕ್ಕಳು ಹಾಗೂ ಅಂಗವಿಕಲ ಮಕ್ಕಳಿಗಳಿಗೆ ಉಚಿತ ವಸತಿಯುತ ಸಂಗೀತದ ಜೊತೆಗೆ ಬ್ರೈಲ್ ಶಿಕ್ಷಣವನ್ನು ನೀಡಲಾಗುತ್ತದೆ. ಹೊಸ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಅಥಣಿ ವೀರಣ್ಣ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಎ.ಎಚ್.ಸಿದ್ದಲಿಂಗ ಸ್ವಾಮಿ, ಕಾರ್ಯದರ್ಶಿಗಳು: 9449266133, ಆನಂದ್ ಪಾಟೀಲ್, ಸಂಗೀತ ಶಿಕ್ಷಕರು :9535715501, ಸುರೇಶ್ ಕೊಪ್ಪಳ, ತಬಲವಾದ ಶಿಕ್ಷಕರು: 9731878914 ಇವರನ್ನು ಸಂಪರ್ಕಿಸಲು ಅಧ್ಯಕ್ಷ ಡಾ.ಅಥಣಿ ವೀರಣ್ಣ ತಿಳಿಸಿದ್ದಾರೆ.



