Connect with us

Dvgsuddi Kannada | online news portal | Kannada news online

ದಾವಣಗೆರೆ: ಈ ಕೋ-ಆಪರೇಟಿವ್ ಸೊಸೈಟಿ ನೋಂದಣಿ ರದ್ಧತಿಗೆ ಕೊನೆ 15 ದಿನ

cooperative societies

ದಾವಣಗೆರೆ

ದಾವಣಗೆರೆ: ಈ ಕೋ-ಆಪರೇಟಿವ್ ಸೊಸೈಟಿ ನೋಂದಣಿ ರದ್ಧತಿಗೆ ಕೊನೆ 15 ದಿನ

ದಾವಣಗೆರೆ: ಜಿಲ್ಲೆಯ ಹರಿಹರದ ಸಹಕಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಸಂಘವು ಸಹಕಾರ ಸಂಘಗಳ ಕಾಯ್ದೆ, ಬೈಲಾ ರೀತ್ಯಾ ಹಾಗೂ ಸ್ಥಾಪನೆ ಉದ್ದೇಶಗಳ ಕಾರ್ಯ ಚಟುವಟಿಗಳನ್ನು ನಡೆಸದೆ ಸ್ಥಗಿತಗೊಳಿಸಲಾಗಿರುತ್ತದೆ. ಈ ಕೋ-ಆಪರೇಟಿವ್ ಸೊಸೈಟಿ ನೋಂದಣಿ ರದ್ಧತಿಗೆರದ್ಧತಿಗೆ ಕೊನೆಯ 15 ದಿನ ಅವಕಾಶ ಕಲ್ಪಿಸಲಾಗಿದೆ.

ಈ ಸಂಘವನ್ನು ಪುನ:ಶ್ಚೇತನಗೊಳಿಸಲು ಯಾರು ಮುಂದೆ ಬಂದಿರುವುದಿಲ್ಲ. ಈ ಸಹಕಾರ ಸಂಘದ ಲೆಕ್ಕ ಪುಸ್ತಕಗಳು, ಚರ ಮತ್ತು ಸ್ಥಿರಾಸ್ತಿಯ ಇರುವಿಕೆಯ ಬಗ್ಗೆ ಮಾಹಿತಿ ದೊರೆಯದ ಪ್ರಯುಕ್ತ ಸಂಘದ ಸಮಸ್ತ ಚಾರಾಸ್ತಿ ಪಡೆಯಲಾಗಿರುವುದಿಲ್ಲ. ಸಂಘದ ಸಿಬ್ಬಂದಿಯವರಾಗಲಿ, ಸದಸ್ಯರಾಗಲಿ, ಆಡಳಿತ ಮಂಡಳಿ ನಿರ್ದೇಶಕರಾಗಲಿ ಅಥವಾ ಸಾರ್ವಜನಿಕರಿಂದಾಗಲಿ ಸಂಘದ ಲೆಕ್ಕ ಪುಸ್ತಕಗಳ ಇರುವಿಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ದಾಖಲೆಗಳ ಸಹಿತ ಸಮಾಪಕರು ಸಹಕಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಹರಿಹರ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ, ಹರಿಹರ ಇವರಿಗೆ ಈ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಅವಧಿಯೊಳಗಾಗಿ ಯಾವುದೇ ಅಹವಾಲು, ಮಾಹಿತಿ ಬಾರದೇ ಇದ್ದಲ್ಲಿ ಸಂಘದ ನೋಂದಣಿಯನ್ನು ರದ್ದು ಪಡಿಸಲು ಕ್ರಮವಿಡಲಾಗುವುದು. ನೋಂದಣಿ ರದ್ದತಿ ನಂತರ ಯಾವುದೇ ರೀತಿಯ ಜವಾಬ್ದಾರಿಗಳಿಗೆ ಸಮಾಪಕರು ಹೊಣೆಗಾರರಾಗುವುದಿಲ್ಲ ಹಾಗೂ ಯಾವುದೇ ಅಹವಾಲು ಇಲ್ಲವೆಂದು ನಡಾವಳಿ ಜರುಗಿಸಿ ನೋಂದಣಿ ರದ್ದತಿ ಮಾಡಲಾಗುವುದೆಂದು ಸಮಾಪನಾಧಿಕಾರಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top