ದಾವಣಗೆರೆ: ದಾವಣಗೆರೆ ತಾಲ್ಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘವತಿಯಿಂದ ಫೋಟೋಗ್ರಾಫರ್ಸ್ ಅಕಾಡೆಮಿ ಸ್ಥಾಪಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಮನವಿ ಸಲ್ಲಿಸಲಾಯಿತು.
ಹುಬ್ಬಳಿಯಲ್ಲಿ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಫೋಟೋ ಟುಡೇ (ಡಿ.ಜಿ.ಇಮೇಜ್) ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್‌ಗೆ ಸಂಘದ ಅಧ್ಯಕ್ಷ, ಮನು ಎಂ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವರು ಮುಖ್ಯಮಂತ್ರಿ ಗಳೊಂದಿಗೆ ಮುಂದಿನ ಅಧೀವೇಶನದಲ್ಲಿ ಚರ್ಚಿಸಿತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಬಿ.ಮಂಜುನಾಥ್, ಗ್ರಾಮಾಂತರ ವಲಯ ಅಧ್ಯಕ್ಷ ಕೊಂಡಜ್ಜಿ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ, ಉಪಾಧ್ಯಕ್ಷ ರಮೇಶ್ ಖಜಾಂಚಿ, ರಂಗನಾಥ ಮಾಜಿ ಪ್ರಧಾನ ಕಾರ್ಯದರ್ಶಿ, ಮಲ್ಲೇಶ್.ಎಚ್.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತಿದ್ದರು.
ದಾವಣಗೆರೆ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಸುಮಾರು 6 ಲಕ್ಷಕ್ಕೂ ಜನರು ಫೋಟೋಗ್ರಫಿ, ವೀಡಿಯೋಗ್ರಫಿ ವೃತ್ತಿಗೆ ಅವಲಂಬಿತರಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ. ನಮ್ಮ ವೃತ್ತಿ ಬಾಂಧವರಿಗೆ ನಮ್ಮದೇ ಆದ ಒಂದು ಅಕಾಡೆಮಿಯನ್ನು ಮಾಡುವಂತೆ ಈ ಹಿಂದೆ ಬಂದತಹ ಸಂಬಧಿಸಿದ ಎಲ್ಲಾ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಇದುವರೆಗೂ ಈ ಕಾರ್ಯ ನಮ್ಮ ರಾಜ್ಯ ಸರ್ಕಾರದಿಂದ ಆಗಿರುವುದಿಲ್ಲ. ಈ ಅಕಾಡೆಮಿ ಮಾಡುವುದರಿಂದ ನಮ್ಮ ಫೋಟೋ, ವಿಡಿಯೋ ಗ್ರಾಫರ್ ಗಳಿಗೆ ಬಹಳ ಅನುಕೂಲವಾಗಲಿದೆ.
ತಾಂತ್ರಿಕತೆ ಬದಲಾದಂತೆ ಕ್ಯಾಮರಾ, ಲೆನ್ಸ್ ಗಳು, ಬ್ಯಾಟರಿ ಸೇರಿದಂತೆ ವೃತ್ತಿಗೆ ಸಂಬಧಿಸಿದ ಎಲ್ಲಾ ವಸ್ತುಗಳೂ ಕೂಡಾ ಬದಲಾಗುತ್ತಿವೆ. ಅವುಗಳಿಗೆ ಅಷ್ಟು ಬಂಡವಾಳ ಹಾಕಿ ಕ್ಯಾಮರಾ ಪರಿಕರಗಳನ್ನು ಖರೀದಿಸಲು ಬಹಳ ತೊಂದರೆಯಾಗುತ್ತಿದೆ. ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳಿದ ನಮ್ಮ ವೃತ್ತಿ ಬಾಂಧವರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಕ್ಯಾಮರಾ ಖರೀದಿಸಲು ಅನುಕೂಲ ಮಾಡಿಕೊಡಬೇಕು. ನಮಗೆ ಯಾವುದೇ ರೀತಿಯ ಸಹಕಾರ ಇರುವುದಿಲ್ಲ. ನಮ್ಮ ಕ್ಯಾಮರಾಗಳಿಗೆ ಯಾವುದೇ ವಿಮೆ ಇರುವುದಿಲ್ಲ. ದಯವಿಟ್ಟು ನಮ್ಮ ಮನವಿಯನ್ನು ತಾವು ಗಮನ ಹರಿಸಬೇಕೆಂದು ಕೇಳಿಕೊಳ್ಳಲಾಗಿದೆ.



