ದಾವಣಗೆರೆ: ದಾವಣಗೆರೆ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ(ರಿ) ಹಾಗೂ ದಾವಣಗೆರೆ ಜಿಲ್ಲೆಯ ರೈತಪರ ಸಂಘನೆಗಳ ಆಶ್ರಯದಲ್ಲಿ ಡಿ.7 ರಂದು ಸಂಜೆ 5 ಗಂಟೆಗೆ ರೈತ ಹುತಾತ್ಮತ ಸಮಾಧಿ, ಹುಳಪಿನಕಟ್ಟೆ ಕ್ರಾಸ್, ಪಾರ್ಕ್ ಪಕ್ಕ, ರಾಷ್ಟ್ರೀಯ ಹೆದ್ದಾರಿ-48, ಆನಗೋಡು ಹತ್ತಿರ, ದಾವಣಗೆರೆ ಇಲ್ಲಿ ರೈತ ಭವನದ ಶಂಕುಸ್ಥಾಪನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಸಾಣೇಹಳ್ಳಿಯ ಶಾಖಾಮಠದ ಶ್ರೀತರಳಬಾಳು ಜಗದ್ಗುರುಗಳಾದ ಡಾ.ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಯವರು ದಿವ್ಯ ಸಾನಿಧ್ಯ ವಹಿಸುವರು. ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಶಂಕುಸ್ಥಾಪನೆಯನ್ನು ನೆರೆವೇರಿಸುವರು. ರೈತ ಹುತಾತ್ಮತ ಸ್ಮರಣಾರ್ಥ ಸಮಿತಿಯ ಗೌರವಾಧ್ಯಕ್ಷ ಹೆಚ್ ನಂಜುಂಡಪ್ಪ ಗೌರವಾಧ್ಯಕ್ಷರಾಗಿರುವರು. ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯ ಅಧ್ಯಕ್ಷರಾದ ಎನ್.ಜಿ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾ ಎಸ್.ಎಸ್.ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರಾದ ಕೆ.ಎಸ್ ಬಸವಂತಪ್ಪ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ತಹಶೀಲ್ದಾರ್ ಡಾ.ಎಂ.ವಿ ಅಶ್ವಥ್, ಎ.ಪಿ.ಎಂ.ಸಿಯ ಕಾರ್ಯದರ್ಶಿ ಹೆಚ್.ಸಿ.ಎಂ ರಾಣಿ ಹಾಗೂ ಇನ್ನಿತರರು ಭಾಗವಹಿಸುವರು.



