ದಾವಣಗೆರೆ: ತಂದೆ-ತಾಯಿ, ಕುಟುಂಬ, ಮದುವೆ, ಮಕ್ಕಳು ಹೀಗೆ ಎಲ್ಲಾ ಲೌಕಿಕ ಜೀವನ ತೊರೆದು ಇಬ್ಬರು ಯುವತಿಯರು ಸನ್ಯಾಸತ್ವ ದೀಕ್ಷೆ ಸ್ವೀಕರುಸಲು ನಿರ್ಧರಿಸಿದ್ದಾರೆ.
ಮಾನಸಿ ಕುಮಾರಿ, ಭಕ್ತಿ ಕುಮಾರಿ ಎಂಬ ಪದವೀಧರರು ಜೈನ ದೀಕ್ಷೆ ಪಡೆದು ಲೌಕಿಕ ಜೀವನ ತ್ಯಜಿಸಲು ನಿರ್ಧಾರ ಮಾಡಿದ್ದಾರೆ. ಮಾನಸಿ ಕುಮಾರಿ ಸೈಕಾಲಜಿ ವಿಷಯದಲದಲಿ ಎಂಎ ಮಾಡಿದ್ರೆ, ಗೋಕಾಕ್ನ ಭಕ್ತಿ ಕುಮಾರಿ ಬಿಎ, ಎಲ್ಎಲ್ಬಿ ಮಾಡಿದ್ದಾರೆ.
ಸದ್ಯ ಇಬ್ಬರೂ 26 ನೇ ವಯಸ್ಸಿಗೆ ಲೌಕಿಕ ಜೀವನ ತೊರೆದು ಅಲೌಕಿಕ ಜೀವನ ಕಡೆ ಮುಖ ಮಾಡಿದ್ದಾರೆ.ಮಾನಸಿ ಕುಮಾರಿ ಹಾಗೂ ಭಕ್ತಿ ಕುಮಾರಿ ಜೈನ ದೀಕ್ಷೆ ಪಡೆಯುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಲಾಗಿತ್ತು. ಸಂಭ್ರಮದಲ್ಲಿ ಭಾಗಿಯಾದ ಇಬ್ಬರ ಯುವತಿಯರ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದರು. ಎರಡೂ ಕುಟುಂಬದವರು ಸಂಬಂಧಿಕರಿಗೆ ಔತಣ ಕೂಟ ಸಹ ಏರ್ಪಡಿಸಿದ್ದರು.
ಸನ್ಯಾಸತ್ವ ಸ್ವೀಕಾರ ಕಾರ್ಯಕ್ರಮವು ನವೆಂಬರ್ 17ಕ್ಕೆ ಜಾರ್ಖಂಡ್ನಲ್ಲಿ ನಡೆಯಲಿದೆ. ಪರಮಪೂಜ್ಯ ಆಚಾರ್ಯ ಶ್ರೀ ಮುಕ್ತಿ ಪ್ರಭು ಸುರೀಶ್ವರ್ ಜೀ ಮಹಾರಾಜರ ಹಾಗೂ ಪರಮ ಪೂಜ್ಯ ಸಾಧವಿ ಶ್ರೀ ಪೂರ್ಣಪ್ರಜ್ಞ ಶ್ರೀ ಜಿ ಮಹಾರಾಜ ಸಮ್ಮುಖದಲ್ಲಿ ರುಜುಬಾಲಿಕಾ ತೀರ್ಥಕ್ಷೇತ್ರದಲ್ಲಿ ಇಬ್ಬರೂ ಜೈನ ಸನ್ಯಾಸತ್ವ ದೀಕ್ಷೆ ಸ್ವೀಕರಿಸಲಿದ್ದಾರೆ.



