Connect with us

Dvgsuddi Kannada | online news portal | Kannada news online

ದಾವಣಗೆರೆ: ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಅ. 21 ರಿಂದ ಆರಂಭ ; ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ

ದಾವಣಗೆರೆ: ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಅ. 21 ರಿಂದ ಆರಂಭ ; ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ: ಜಿಲ್ಲೆಯ ಜಾನುವಾರುಗಳಿಗೆ ಕಾಲುಬಾಯಿ ರೋಗ ತಡೆಗಾಗಿ 6 ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಅಕ್ಟೋಬರ್ 21 ರಿಂದ ನೆವಂಬರ್ 20 ರವರೆಗೆ ಸತತವಾಗಿ ಒಂದು ತಿಂಗಳ ಕಾಲ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರದಡಿ 6 ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 20 ನೇ ಜಾನುವಾರು ಗಣತಿಯಂತೆ 329697 ದನ ಮತ್ತು ಎಮ್ಮೆಗಳಿದ್ದು ಇವುಗಳಿಗೆ ಶೇ 100 ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರದಿಂದ 2,60,700 ಡೋಸ್ ಕಾಲು ಬಾಯಿ ರೋಗ ಲಸಿಕೆ ಸರಬರಾಜಾಗಿದ್ದು ಅಷ್ಟೇ ಪ್ರಮಾಣದ ಸಿರಿಂಜ್ ಸಹ ಸರಬರಾಜಾಗಿದೆ.

ಜಾನುವಾರುಗಳಿಗೆ ಲಸಿಕೆ ಹಾಕಲು ಒಂದು ಬ್ಲಾಕ್‍ಗೆ 100-120 ಜಾನುವಾರುಗಳಂತೆ 2800 ಬ್ಲಾಕ್ ಗಳನ್ನು ರಚಿಸಿದ್ದು 321 ಲಸಿಕಾದಾರರಿಗೆ ಬ್ಲಾಕ್‍ವಾರು ಲಸಿಕಾ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಹಾಗೂ ಲಸಿಕಾ ಸಂದರ್ಭದಲ್ಲಿ ಆಕಸ್ಮಿಕ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಅವಶ್ಯಕ ಔಷಧಿಗಳನ್ನು ಕೂಡಾ ಸಂಗ್ರಹಿಸಿಡಲಾಗಿದೆ. 4 ತಿಂಗಳ ಮೇಲಿನ ಎಲ್ಲಾ ಜಾನುವಾರುಗಳಿಗೆ ಮನೆಬಾಗಿಲಲ್ಲೆ ಲಸಿಕೆ ಹಾಕಲಾಗುತ್ತದೆ. ಮತ್ತು ಕರುಗಳಿಗೆ 28 ದಿನಗಳ ನಂತರ ಬೂಸ್ಟರ್ ಲಸಿಕೆ ಹಾಕಲಾಗುತ್ತದೆ. ಗರ್ಭ ಇರುವ, ರೋಗಗ್ರಸ್ತ ಮತ್ತು ಮಾಲೀಕರು ನಿರಾಕರಿಸಿದ ಜಾನುವಾರುಗಳಿಗೆ ಕೂಂಬಿಂಗ್ ಕಾರ್ಯಕ್ರಮದಲ್ಲಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯ ಜಾನುವಾರು ಸಂಖ್ಯೆ: ದನಗಳು 237801, ಎಮ್ಮೆಗಳು 91896 ಸೇರಿ ಒಟ್ಟು 329697, ಕುರಿಗಳು 238367, ಮೇಕೆಗಳು 79429 ಸೇರಿ ಒಟ್ಟು 317796, ಮೊಲ 98, ಇತರೆ 45, ನಾಯಿಗಳು 12091, ಹಂದಿಗಳು 2117 ಸೇರಿ ಒಟ್ಟು ಜಾನುವಾರಗಳು 661844, ಕುಕ್ಕಟಗಳು 2505966 ಇರುತ್ತವೆ.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕರಾದ ಡಾ.ಚಂದ್ರಶೇಖರ್ ಸುಂಕದ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top