ದಾವಣಗೆರೆ: ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ತರುವಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಎನ್.ಜಿ.ಓ ಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಸಂಘ-ಸಂಸ್ಥೆಗಳು, ಎನ್.ಜಿ.ಓ ಗಳು ಕನಿಷ್ಠ 5 ವರ್ಷಗಳಿಂದ ನೊಂದಾಯಿಸಿಕೊಂಡಿರಬೇಕು, 5 ವರ್ಷ ವಾರ್ಷಿಕ ವರದಿ, ಆಡಿಟ್ ವರದಿ ಹಾಗೂ ಆದಾಯ ತೆರಿಗೆ ಪಾವತಿಸಿರುವ ದಾಖಲೆ, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲದ ವಿವರವಾದ ಪಟ್ಟಿ, ಸಲ್ಲಿಸಬೇಕು. ಹಣಕಾಸಿನ ವಹಿವಾಟು ಮತ್ತು ಬ್ಯಾಂಕ್ ಶಿಲ್ಕು, ವಿಶೇಷ ತರಬೇತಿ ಕೇಂದ್ರ ನಡೆಸಲು ಖಾತ್ರಿಪಡಿಸಬೇಕು. ಹಾಗೂ ಭಾಗವಹಿಸುವ ಸಂಸ್ಥೆ ಆರ್ಥಿಕ ಸದೃಢತೆ ಹೊಂದಿರಬೇಕು. ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಇಚ್ಛಿಸಿದ ಕಾರ್ಯತಂತ್ರದಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಪ್ರಸ್ತಾವನೆಯ ಎಲ್ಲಾ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ಕಡ್ಡಾಯವಾಗಿ ದೃಢೀಕರಿಸಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಸರ್ಕಾರೇತರ ಸಂಘ ಸಂಸ್ಥೆಯವರು ಪ್ರಸ್ಥಾವನೆಯನ್ನು ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಅಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ, ದಾವಣಗೆರೆ ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ನ.06 ರ ಒಳಗಾಗಿ ಸಲ್ಲಿಸಬೇಕು ಎಂದು ಡಿಡಿಪಿಐ ಪರಮೇಶ್ವರಪ್ಪ ಸಿ.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



