ದಾವಣಗೆರೆ: ದಾವಣಗೆರೆ ಅಭಿವೃದ್ಧಿಗೆ ಬಿಜೆಪಿ ಯಾವುದೇ ಕೊಡುಗೆ ನೀಡಲಿಲ್ಲ. ಕಳೆದ ಒಂದೂವರೆ ವರ್ಷದ ಕಾಂಗ್ರೆಸ್ ಅಭಿವೃದ್ಧಿ ಕಾರ್ಯದಿಂದ ಬಿಜೆಪಿಗರಲ್ಲಿ ಹತಾಶೆ ಉಂಟಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೀರ್ಘ ಕಾಲ ಸಂಸರಾದ ಜಿ.ಎಂ.ಸಿದ್ದೇಶ್ವರಾಗಲಿ, ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ದಾವಣಗೆರೆ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಈಗ ನಡೆಯುತ್ತಿರುವ ಕಾಮಗಾರಿಗಳನ್ನು ನೋಡಿ ಹತಾಶೆಗೆ ಒಳಗಾಗಿದ್ದಾರೆ ಎಂದರು.
ನಗರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸುವಲ್ಲಿ ಬಿಜೆಪಿ ವಿಫಲರಾಗಿದೆ. ಬಿಜೆಪಿಗರು ಹಾಳು ಮಾಡಿರುವುದನ್ನು ದುರಸ್ತಿ ಮಾಡುವುದೇ ಕೆಲಸವಾಗಿದೆ. ಈಗ ನಗರದಲ್ಲಿ ಮಳೆ ಬಂದರೂ ರಸ್ತೆ ಹಾಳಾಗುತ್ತಿಲ್ಲ. ಈ ಬಗ್ಗೆ ಒಂದು ದೂರು ಬಂದಿಲ್ಲ’ ಎಂದರು.
ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯ ನಾಗರಾಜ್, ಆಯುಕ್ತೆ ರೇಣುಕಾ ಇತ್ತಿತರರು ಇದ್ದರು.



