ದಾವಣಗೆರೆ: ರುಡ್‌ಸೆಟ್ ಸಂಸ್ಥೆಯಿಂದ ಚಿತ್ರದುರ್ಗದಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಸ್ವ ಉದ್ಯೋಗದಲ್ಲಿ ಆಸಕ್ತಿ ಇರುವವರಿಗೆ 30 ದಿನಗಳ ತರಬೇತಿ ಆಯೋಜಿಸಿದೆ. ಎಲೆಕ್ಟ್ರೀಕ್ ಪಂಪ್ ಸೆಟ್ ರಿವೈಂಡಿಂಗ್ ಹಾಗೂ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ನೀಡಲಾಗುವುದು. ಜಲೈ ತಿಂಗಳಲ್ಲಿ ಇದೇ ಜುಲೈ ನಲ್ಲಿ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಗೆ ಸಂದರ್ಶನ ಜು.13ರಂದು ಚಿತ್ರದುರ್ಗದ ರುಡ್‌ಸೆಟ್ ಸಂಸ್ಥೆಯ ಆವರಣ ನಡೆಯಲಿದೆ.
ಅಭ್ಯರ್ಥಿಗಳ ಅರ್ಹತೆ: 19 ರಿಂದ 45 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. ಕನ್ನಡ ಓದು ಬರಹ ಬಲ್ಲವರಾಗಿರಬೇಕು. ತರಬೇತಿಗೆ ಸಂಬಂದಪಟ್ಟ ಕೌಶಲ್ಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಫೋನ್/ಮೊಬೈಲ್ ನಂಬರ್‌ವುಳ್ಳ ಸ್ವವಿಳಾಸದ ಅರ್ಜಿಯೊಂದಿಗೆ ಜು. 13ರಂದು ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆಯ ಕಛೇರಿಯಲ್ಲಿ ನೇರ ಸಂದರ್ಶನದಲ್ಲಿ ಭಾಗವಹಿಸಲು ಈ ಮೂಲಕ ತಿಳಿಸಲಾಗಿದೆ.
ತರಬೇತಿಗೆ ಆಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನೇರ ಸಂದರ್ಶನದ ಮೂಲಕ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618282445, 9449732805/ 08194- 223505.



