ದಾವಣಗೆರೆ: ದೊಡ್ಡಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಜುಲೈ 4 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಖಾನೆಯ ಕಚೇರಿ ಸ್ಥಳದಲ್ಲಿ ನಡೆಯಲಿದೆ.
ಜೂನ್ 20 ರಿಂದ 27 ನಾಮಪತ್ರ ಸಲ್ಲಿಸಲು ಅವಕಾಶ, ಜೂನ್ 28 ನಾಮಪತ್ರ ಪರಿಶೀಲನೆ, ಜೂನ್ 29 ನಾಮಪತ್ರ ವಾಪಾಸ್ ಪಡೆಯುವ ದಿನ ಎಂದು ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ರಿಟರ್ನಿಂಗ್ ಅಧಿಕಾರಿ ತಿಳಿಸಿದ್ದಾರೆ.



