Connect with us

Dvgsuddi Kannada | online news portal | Kannada news online

ಜು.31ರೊಳಗೆ ದಾವಣಗೆರೆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಸಿ; ಶೇ. 5ರಷ್ಟು ರಿಯಾಯಿತಿ

ದಾವಣಗೆರೆ

ಜು.31ರೊಳಗೆ ದಾವಣಗೆರೆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಸಿ; ಶೇ. 5ರಷ್ಟು ರಿಯಾಯಿತಿ

ದಾವಣಗೆರೆ: ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿಸಲು ಏಪ್ರಿಲ್ 2024 ರಿಂದ ಪ್ರಾರಂಭವಾಗಿದ್ದು ಸಕಾಲದಲ್ಲಿ ಪಾವತಿಸಿದವರಿಗೆ ಆಸ್ತಿ ತೆರಿಗೆಯ ಮೇಲೆ ಶೇ.5 ರಷ್ಟು ರಿಯಾಯತಿ ನೀಡುವ ಸೌಲಭ್ಯವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಸ್ವತ್ತಿಗೆ ಸಂಬಂಧಿಸಿದ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಿ ಶೇ.5 ರ ರಿಯಾಯಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು.

ಆಸ್ತಿ ತೆರಿಗೆ ಪಾವತಿಸಿಕೊಳ್ಳುವ ಸ್ಥಳ: ವಲಯ ಕಚೇರಿ-1, ಮಹಾನಗರಪಾಲಿಕೆ, ರಾಜೀವಗಾಂಧಿ ಬಡಾವಣೆ, ಬೂದಾಳ್ ರಸ್ತೆ ದಾವಣಗೆರೆ. ವಲಯ ಕಚೇರಿ-2, ಮಹಾನಗರಪಾಲಿಕೆ, ಲೋಕಿಕೆರೆ ರಸ್ತೆ, ಟಿವಿ ಸ್ಟೇಷನ್ ಎದುರು ದಾವಣಗೆರೆ, ವಲಯ ಕಚೇರಿ-3, ಮಹಾನಗರಪಾಲಿಕೆ, ಆಶ್ರಯ ಆಸ್ಪತ್ರೆ ಪಕ್ಕ ದಾವಣಗೆರೆ, ಸಾರ್ವಜನಿಕರು ವೆಬ್ ಸೈಟ್ http://davanagerecitycorp.org ಉಪಯೋಗಿಸಿಕೊಂಡು ಮತ್ತು ಗೂಗಲ್ ಪೇ, ಪೋನ್ ಪೇ, ನಗದು, ಚೆಕ್ ಮುಖಾಂತರವೂ ಸಹ ಆಸ್ತಿ ತೆರಿಗೆ ಪಾವತಿಸಬಹುದೆಂದು ಪಾಲಿಕೆ ಆಯುಕ್ತ ರೇಣುಕಾ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top