ದಾವಣಗೆರೆ; ಕೇಂದ್ರ ಸರ್ಕಾರದ ಅಲಿಮ್ಕೋ ಸಂಸ್ಥೆಯಿಂದ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಮೌಲ್ಯಮಾಪನ ತಪಾಸಣಾ ಶಿಬಿರಕ್ಕೆ ಹಾಜರಾಗವುದಕ್ಕಾಗಿ ಅಲಿಮ್ಕೋ ಸಂಸ್ಥೆ, ಕಾವೇರಮ್ಮ ಸರ್ಕಾರಿ ಶಾಲೆ ಆವರಣ ಕೆ.ಬಿ ಬಡಾವಣೆ, ದಾವಣಗೆರೆ ಇಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ನೋಂದಾಯಿಸಲು ಸಲ್ಲಿಸಬೇಕಾದ ದಾಖಲೆಗಳು: ವಿಕಲಚೇತನರಿಗೆ (ಅಡಿಪ್ ಯೋಜನೆಯಡಿ) ಯು.ಡಿ.ಐ.ಡಿ ಕಾರ್ಡ್ ಮತ್ತು ಸರ್ಟಿಫಿಕೇಟ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬಿ.ಪಿ.ಎಲ್ ರೇಷನ್ ಕಾರ್ಡ್, ಪಾಸ್ಫೋರ್ಟ್ ಸೈಜ್ ಪೋಟೋ
ಹಿರಿಯ ನಾಗರಿಕರಿಗೆ ವಯೋಶ್ರೀ ಯೋಜನೆಯಡಿ: ಆಧಾರ್ ಕಾರ್ಡ್, ವಯಸ್ಸಿನ ದೃಢೀಕರಣ ಪತ್ರ, ಆದಾಯ ಪ್ರಮಾಣ ಪತ್ರ, ಬಿ.ಪಿ.ಎಲ್. ರೇಷನ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9793694269, 08192-295442 ನ್ನು ಸಂಪರ್ಕಿಸಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.



