ದಾವಣಗೆರೆ; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ, ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ, ಲೋಕಸಭಾ ಚುನಾವಣಾ ಅಂಗವಾಗಿ ಮೇ.1 ರಂದು ಸಂಜೆ 5 ಗಂಟೆಗೆ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಾಸ್ಕೆಟ್ ಬಾಲ್ ಗ್ರೌಂಡ್‍ನಲ್ಲಿ ಪೆಟ್ ರ್‍ಯಾಂಪ್ ವಾಕ್ ಆಯೋಜಿಸಲಾಗಿದೆ.
ಭಾಗವಹಿಸುವ ಸಾಕುಪ್ರಾಣಿ ನಾಯಿ,ಬೆಕ್ಕು ಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ಮತ್ತು ಜಂತು ನಾಶಕ ಔಷಧಿಗಳನ್ನು ವಿತರಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಕುಪ್ರಾಣಿಗಳ ಮಾಲೀಕರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಚಂದ್ರಶೇಖರ್ ಎಸ್ ಸುಂಕದ ತಿಳಿಸಿದ್ದಾರೆ.



