ದಾವಣಗೆರೆ: ಏ. 28 ರಂದು ದಾವಣಗೆರೆಯಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ಪಕ್ಷದ ನಾಯಕರು ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಪ್ರಧಾನಿಯವರು ಬಹಿರಂಗ ಸಮಾವೇಶದಲ್ಲಿ ಕೋಮು ಭಾವನೆ ಕೆರಳಿಸುವ, ದ್ವೇಷದ ಹೇಳಿಕೆ ನೀಡುತ್ತಾರೆ. ಹೀಗಾಗಿ ದಾವಣಗೆರೆಯಲ್ಲಿ ಅವರ ಸಭೆಗೆ ಅನುಮತಿ ನೀಡಬಾರದು. ರ್‍ಯಾಲಿ ಮತ್ತು ಬಹಿರಂಗ ಸಭೆಗೆ ಅನುಮತಿ ನೀಡಿದಲ್ಲಿ ಗೋಬ್ಯಾಕ್ ಪಿಎಂ ಎಂಬ ಘೋಷಣೆ ಜೊತೆಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.