ದಾವಣಗೆರೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.53 ಲಕ್ಷ ನಗದು ಹಣವನ್ನು ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿ ಕ್ರಾಸ್ ಚೆಕ್ ಪೋಸ್ಟ್ ಬಳಿ ಎಸ್ ಎಸ್ ಟಿ ತಂಡ ಮತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಎಸ್. ಮಲ್ಲಾಪುರ ಗ್ರಾಮದ ನಿವಾಸಿ ತಿಮ್ಮೇಶ್ ಎನ್ನುವವರು ಗೂಡ್ಸ್ ವಾಹನದಲ್ಲಿ ದಾಖಲೆ ಇಲ್ಲದೆ 1, 53,650 ಹಣವನ್ನು ಸಾಗಿಸುತ್ತಿದ್ದರು. ಹರಿಹರದಿಂದ ಎಸ್. ಮಲ್ಲಾಪುರ ಗ್ರಾಮದ ಕಡೆ ವಾಹನ ಹೋಗುತ್ತಿದ್ದಾಗ, ವಾಹನವನ್ನು ಗೊಲ್ಲರಹಳ್ಳಿ ಕ್ರಾಸ್ ಚೆಕ್ ಪೋಸ್ಟ್ ಬಳಿ ತಡೆದು ಪರಿಶೀಸಿದಾಗ ಹಣ ಪತ್ತೆಯಾಗಿದೆ. ಹಣಕ್ಕೆ ಸೂಕ್ತ ದಾಖಲಿ ನೀಡಿಲ್ಲದ ಕಾರಣ ಹಣ ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಂಡ ಹಣವನ್ನು ಹೊನ್ನಾಳಿ ಉಪ ಖಜಾನೆ ಅಧಿಕಾರಿಗೆ ಸುಪರ್ದಿಗೆ ಒಪ್ಪಿಸಲಾಗಿದೆ. ಈ ಸಂದರಗಭದಲ್ಲಿ ಎಸ್ ಎಸ್ ಟಿ ತಂಡದ ರತ್ನಾ ನಾಯ್ಕ್, ವೆಂಕಟೇಶ್, ಪಿಎಸ್ ಐ ನಿರ್ಮಾಲಾ, ಪಿಸಿ ಪ್ರಸನ್ನ ಟಿ ಇದ್ದರು.



