ದಾವಣಗೆರೆ: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಬವ ಅಭಿವೃದ್ಧಿ ನಿಗಮದಡಿ ರೈತರಿಗೆ ವಿತರಿಸಲು ತಂದಿದ್ದ ಪಂಪ್‌ಸೆಟ್ ಮೋಟಾರು, ಉಪಕರಣ ಕಳಪೆ ಆಗಿದ್ದನ್ನು ಕಂಡ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ವಿತರಣೆ ನಿಲ್ಲಿಸಿ ವಾಪಸ್ ಕಳುಹಿಸಿದರು. ಇದೇ ವೇಳೆ ರೈತರಿಗೆ ಗುಣಮಟ್ಟದ ಪಂಪ್ ಸೆಟ್ ಮೋಟಾರು, ಉಪಕರಣಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕಿನ ಆನಗೋಡು ಗ್ರಾಮದ ಮರಳುಸಿದ್ದೇಶ್ವರ ದೇವಸ್ಥಾನದಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಬವ ಅಭಿವೃದ್ಧಿನಿಗಮದಡಿ 2020-2022 ನೇ ಸಾಲಿನಲ್ಲಿ ಕೊರೆದಿದ್ದ ಬೋರ್‌ವೆಲ್‌ಗಳ 32 ಫಲಾನುಭವಿ ರೈತರಿಗೆ ಅಧಿಕಾರಿಗಳು ಪಂಪ್ ಸೆಟ್ ಮೋಟಾರು, ಪೈಪ್‌ಗಳು ಮತ್ತು ಉಪಕರಣಗಳನ್ನು ವಿತರಿಸಿದರು. ಉಪಕರಣಗಳು ಕಳಪೆ ಗುಣಮಟ್ಟದಿಂದ ಕೂಡಿದ್ದವು. ಇದನ್ನು ರೈತರು ಶಾಸಕರಿಗೆ ಮಾಹಿತಿ ನೀಡಿದರು.ವಿತರಣಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಪರಿಶೀಲನೆ
ನಡೆಸಿ, ಐಎಸ್‌ಐ ಮಾರ್ಕ್ ಇಲ್ಲದ ಪಂಪ್‌ಸೆಟ್ ಮೋಟಾರು, ಪೈಪ್ ಗಳು, ಉಪಕರಣ ನೀಡಿದ್ದಕ್ಕೆ ತರಾಟೆಗೆ ತೆಗೆದುಕೊಂಡರು.
ಬೋರ್ ವೆಲ್ ಕೊರೆಯುವುದು, ಪಂಪ್‌ಸೆಟ್ ಮೋಟಾರು, ಪೈಪ್,ಉಪಕರಣಗಳ ಒಟ್ಟು ಸೌಲಭ್ಯ ಕಲ್ಪಿಸಲು ಸರ್ಕಾರ ಒಬ್ಬ ರೈತಫಲಾನುಭವಿಗೆ 5 ಲಕ್ಷ ರೂ. ಕೊಡುತ್ತದೆ. ಆದರೆ ಇಲ್ಲಿ ಕಳಪೆ ಗುಣಮಟ್ಟದ ಪಂಪ್‌ಸೆಟ್ ಮೋಟಾರು, ಪೈಪ್, ಉಪಕರಣ
ವಿತರಿಸಲಾಗಿದೆ. ಈ ಉಪಕರಣಗಳನ್ನು ಖರೀದಿಸಿದ ಸರಿಯಾದ ಬಿಲ್, ಐಎಸ್ ಐ ಮಾರ್ಕ್ ಇಲ್ಲ. ಹೀಗಾಗಿ ಈ ಉಪಕರಣಳನ್ನು ವಾಪಸ್ ತೆಗೆದುಕೊಂಡು ಹೋಗಿ, ಗುಣಮಟ್ಟದ ಉಪಕರಣಗಳನ್ನು ವಿತರಿಸಿ. ಇಲ್ಲದಿದ್ರೆ ಸಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ಧಿನಿಗಮದ ಡಿ.ಎಂ.ಬಸವರಾಜಪ್ಪ, ಫೀಲ್ಡ್ ಆಫೀಸರ್ ಮರಿಸ್ವಾಮಿ, ಕರಿಬಸಪ್ಪ ಬಸವರಾಜ್, ನಸರುಲ್ಲಾ ಗ್ರಾಪಂ ಸದಸ್ಯ ದೇವಣ್ಣ, ಬಸಣ್ಣ,ಫಲಾನುಭವಿಗಳು, ಗ್ರಾಮಸ್ಥರು ಹಾಜರಿದ್ದರು.



