ದಾವಣಗೆರೆ: ಶೆಡ್ ತೆರವು ವಿಚಾರಕ್ಕೆ ಸ್ಥಳೀಯರ ಮಧ್ಯೆ ಗಲಾಟೆ ನಡೆದೆ. ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಎಸ್. ಟಿ. ವೀರೇಶ್ ಸಮ್ಮುಖದಲ್ಲಿಯೇ ಸ್ಥಳೀಯರು ಕೈ-ಕೈ ಮಿಲಾಯಿಸಿದ್ದಾರೆ.
ಈ ಘಟನೆ ನಗರದ ಕಾಟನ್ ಮಿಲ್ ಪ್ರದೇಶದಲ್ಲಿ ನಡೆದಿದೆ. ಕಳೆದ ವಾರ ಭಾರೀ ಮಳೆ ಸುರಿದ್ದಿದ್ದರಿಂದ ನೀರು ಸರಾಗವಾಗಿ ಹರಿಸದು ಹೋಗಲು ಮೂಲಸೌಕರ್ಯ ಕಲ್ಪಿಸಲು 31ನೇ ವಾರ್ಡ್ ಸದಸ್ಯ ನಾಗರಾಜ್ ಮನವಿ ಮಾಡಿದ್ದರು. ಮೇಯರ್ ಎಸ್. ಟಿ. ವೀರೇಶ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಕೈ-ಕೈ ಮಿಲಾಯಿಸಿ ಸ್ಥಳೀಯರು ಗಲಾಟೆ ಮಾಡಿಕೊಂಡಿದ್ದಾರೆ.
ನೀರು ಸರಾಗವಾಗಿ ಹರಿಸದು ಹೋಗಲು ಕಸ ತುಂಬದಂತೆ ಸ್ಲಾಬ್ ನಿರ್ಮಾಣಕ್ಕೆ ಶೆಡ್ ತೆರವು ಮಾಡುವಂತೆ ಮೇಯರ್ ಸೂಚಿಸಿದ್ದಾರೆ. ಆಗ ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿ ಸ್ಥಳೀಯರೊಂದಿಗೆ ಜಗಳಕ್ಕಿಳಿದು ಕೈ-ಕೈ ಮಿಲಾಯಿಸಿದ್ದಾರೆ. ಈ ವೇಳೆ ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಮೇಯರ್ ಹಾಗೂ ಪಾಲಿಕೆ ಸದಸ್ಯರು ಬಿಡಿಸಿದರೂ ಬಿಡದೆ ಜೋರಾಗಿ ಗಲಾಟೆ ನಡೆದಿದೆ.