ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೊಸ ಮಾರ್ಗಸೂಚಿಯನ್ವಯ ಸಂಘಗಳು ನಿಯಮಾನುಸಾರ ನವೀಕರಣಗೊಳಿಸಲು ಹಾಗೂ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ ನವೀಕರಣಗೊಳ್ಳದ ಸಂಘದ ಮಾನ್ಯತೆ ರದ್ದುಗೊಳಲಿದೆ.
ಹೊಸ ಕಾರ್ಯ ವಿಧಾನದ ಹಾಗೂ ಮಾರ್ಗಸೂಚಿಯನ್ವಯ ಪ್ರತಿ ಆರ್ಥಿಕ ವರ್ಷದಲ್ಲಿ ನವೀಕರಣಗೊಳ್ಳದ ಸಂಘಗಳ ನೋಂದಣಿ, ಮಾನ್ಯತೆ ರದ್ದಾಗಿರುತ್ತದೆ. ಆದ್ದರಿಂದ ಯುವಜನರು ಕ್ರೀಡೆ, ಶೈಕ್ಷಣಿಕ, ಸಾಂಸ್ಕøತಿಕ ಹಾಗೂ ಸಮುದಾಯ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ 18 ರಿಂದ 35 ವಯೋಮಿತಿಯ ಯುವಕ,ಯುವತಿ ಸಂಘಗಳು ತುರ್ತಾಗಿ ಇಲಾಖೆಯ ಹೊಸ ಕಾರ್ಯವಿಧಾನ,ಮಾರ್ಗಸೂಚಿಯನ್ವಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಸಂಘಗಳನ್ನು ನವೀಕರಣಗೊಳಿಸಲು ಹಾಗೂ ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದೆಂದು ಯುವ ಮತ್ತು ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀಬಾಯಿ ತಿಳಿಸಿದ್ದಾರೆ.



