ದಾವಣಗೆರೆ: 76ನೇ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ಅಂಗವಾಗಿ ದಾವಣಗೆರೆ ತಾಲೂಕು ಗ್ರಾಮೀಣ ಯುವ ಕ್ರೀಡಾ ಸ್ಪರ್ಧೆ ಫೆ.18 ಭಾನುವಾರ ಬೆಳಿಗ್ಗೆ 9ರಿಂದ ಇಲ್ಲಿನ ಹದಡಿ ರಸ್ತೆಯ ಮಾಗನೂರು ಬಸಪ್ಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ಉದ್ಘಾಟನೆಯಲ್ಲಿ ಸಾಧು ಸದ್ಧರ್ಮ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಚ್.ಡಿ. ಮಹೇಶ್ವರಪ್ಪ, ಕಾರ್ಯದರ್ಶಿ ಸಂಗಮೇಶ್ವರಗೌಡ್ರು, ಕನ್ನಡ ಸಾಹಿತ್ಯ ಪರಿಷತ್
ಅಧ್ಯಕ್ಷ ಬಿ.ವಾಮದೇವಪ್ಪ, ಜವಳಿ ಉದ್ಯಮಿ ಬಿ.ಸಿ.ಉಮಾಪತಿ, ನಗರಸಭೆ ಮಾಜಿ ಅಧ್ಯಕ್ಷ ಶಿವನಹಳ್ಳಿ ರಮೇಶ್, ಬೇತೂರು ಕರಿಬಸಪ್ಪ, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ, ಉದ್ಯಮಿ ಶ್ರೀನಿವಾಸ ಶಿವಗಂಗಾ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಕಕ್ಕರಗೊಳ್ಳದ ಪರಮೇಶ್ವರಪ್ಪ, ಕಂಸಾಗರದ ಪಂಚಣ್ಣ, ಪಾಲಿಕೆ ಸದಸ್ಯೆ ಗೀತಾದಿಳ್ಯಪ್ಪ ಪಾಲ್ಗೊಳ್ಳುವರು. ಕ್ರೀಡಾಪಟುಗಳು ಹೆಸರು ನೋ೦ದಾಯಿಸಲು ಮೊ: 9980155612, 9972558940, 9900764666 ಸಂಪರ್ಕಿಸಬಹುದು.



