Connect with us

Dvgsuddi Kannada | online news portal | Kannada news online

ದಾವಣಗೆರೆ: ನಿಮ್ಮ ಮಕ್ಕಳನ್ನು ಕ್ರೀಡಾ ಶಾಲೆ, ನಿಲಯಕ್ಕೆ ಸೇರಿಸಬೇಕಾ..? 2024-25ನೇ ಸಾಲಿನ ಪ್ರಾಥಮಿಕ, ಪ್ರೌಢ ಶಾಲೆ ಪ್ರವೇಶಕ್ಕೆ ಆಯಾ ತಾಲ್ಲೂಕು ಮಟ್ಟದಲ್ಲಿ ಆಯ್ಕೆ

IMG 20231222 203446

ದಾವಣಗೆರೆ

ದಾವಣಗೆರೆ: ನಿಮ್ಮ ಮಕ್ಕಳನ್ನು ಕ್ರೀಡಾ ಶಾಲೆ, ನಿಲಯಕ್ಕೆ ಸೇರಿಸಬೇಕಾ..? 2024-25ನೇ ಸಾಲಿನ ಪ್ರಾಥಮಿಕ, ಪ್ರೌಢ ಶಾಲೆ ಪ್ರವೇಶಕ್ಕೆ ಆಯಾ ತಾಲ್ಲೂಕು ಮಟ್ಟದಲ್ಲಿ ಆಯ್ಕೆ

ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಸುತ್ತಿರುವ ಕ್ರೀಡಾ ಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ 2024-25ನೇ ಸಾಲಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಆನಂತರ ವಿವಿಧ ಹಂತಗಳಲ್ಲಿ ಆಯ್ಕೆಯನ್ನು ನಡೆಸಿ, ಕ್ರೀಡಾ ಶಾಲೆ ಹಾಗೂ ನಿಲಯಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

ದಾವಣಗೆರೆ ಕ್ರೀಡಾ ಶಾಲೆ ಕಿರಿಯರ ವಿಭಾಗದಲ್ಲಿ ಕಬಡ್ಡಿ, ಕುಸ್ತಿ, ಅಥ್ಲೆಟಿಕ್ ಮತ್ತು ಖೋ-ಖೋ (ಬಾಲಕರು) ಕ್ರೀಡೆಗಳಿಗೆ ಭಾಗವಹಿಸುವವರು 2024 ರ ಜೂನ್ ಮಾಹೆಗೆ 11 ವರ್ಷ ಮೀರಿರಬಾರದು ಮತ್ತು 5ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು.ಮೊದಲನೆ ಹಂತದಲ್ಲಿ ಕಿರಿಯರ ವಿಭಾಗದಲ್ಲಿ ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೇಟ್‍ಬಾಲ್, ಫುಟ್‍ಬಾಲ್, ವಾಲಿಬಾಲ್, ಜಿಮ್ನಾಸ್ಟಿಕ್, ಈಜು (ಬಾಲಕ, ಬಾಲಕಿಯರು), ಕಬಡ್ಡಿ ಮತ್ತು ಖೋ-ಖೋ (ಬಾಲಕರು) ಕ್ರೀಡೆಗಳಿಗೆ ಪ್ರವೇಶ ಬಯಸುವ ಕ್ರೀಡಾಪಟುಗಳು 2024 ರ ಜೂನ್ ಮಾಹೆಗೆ 14 ವರ್ಷ ಮೀರಿರಬಾರದು. ಮತ್ತು 8ನೇ ತರಗತಿ ಸೇರಲು ಆರ್ಹತೆ ಹೊಂದಿರಬೇಕು.

ಹಿರಿಯರ ವಿಭಾಗದಲ್ಲಿ ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೇಟ್ ಬಾಲ್, ಫುಟ್ ಬಾಲ್, ವಾಲಿಬಾಲ್, ಜಿಮ್ನಾಸ್ಟಿಕ್. (ಬಾಲಕ, ಬಾಲಕಿಯರು) ಕಬಡ್ಡಿ ಮತ್ತು ಖೋ-ಖೋ (ಬಾಲಕರು) ಕ್ರೀಡೆಗಳಿಗೆ ಪ್ರವೇಶ ಬಯಸುವ ಕ್ರೀಡಾಪಟುಗಳು 2024 ರ ಜೂನ್ ಮಾಹೆಗೆ 18 ವರ್ಷ ಮೀರಿರಬಾರದು ಮತ್ತು ಪ್ರಥಮ ಪಿ.ಯು.ಸಿ ತರಗತಿ ಸೇರಲು ಆರ್ಹತೆ ಹೊಂದಿರಬೇಕು.

ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಡಿ.28 ರಂದು ನ್ಯಾಮತಿ ತಾಲ್ಲೂಕಿಗೆ ಸಂಬಂಧಿಸಿದಂತೆ ನ್ಯಾಮತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮತ್ತು ಹೊನ್ನಾಳಿ ತಾಲ್ಲೂಕಿಗೆ ಸಂಬಂಧಿಸಿದಂತೆ ಹೊನ್ನಾಳಿ ತಾಲ್ಲೂಕು ಕ್ರೀಡಾಂಗಣದಲ್ಲಿ, ಡಿ.29 ರಂದು ಚನ್ನಗಿರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಚನ್ನಗಿರಿ ತಾಲ್ಲೂಕು ಕ್ರೀಡಾಂಗಣ, ಜಗಳೂರು ತಾಲ್ಲೂಕಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಬೆÉೀಡರ ಕಣ್ಣಪ್ಪ ಪ್ರೌಢಶಾಲಾ ಮೈದಾನ, ಡಿ. 30 ರಂದು ಹರಿಹರ ತಾಲ್ಲೂಕಿಗೆ ಸಂಬಂಧಿಸಿದಂತೆ ಹರಿಹರ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ.

ಜನವರಿ 1 ರಂದು ಕ್ರೀಡಾ ನಿಲಯದ ಜಿಲ್ಲಾ ಮಟ್ಟದ ಆಯ್ಕೆಗೆ ಹಾಗೂ ಜನವರಿ 2 ರಂದು ಜಿಲ್ಲಾ ಕ್ರೀಡಾ ವಸತಿ ಶಾಲೆಗೆ ಪ್ರವೇಶ ಪಡೆಯಲಿಚ್ಚಿಸುವ (ಕುಸ್ತಿ, ಕಬಡ್ಡಿ ಮತ್ತು ಖೋ-ಖೋ) 11 ವರ್ಷದೊಳಗಿನ ಬಾಲಕರ ಆಯ್ಕೆ ಪ್ರಕ್ರಿಯೆಯು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ವಿವಿಧ ತಾಲ್ಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದೇ ರಾಜ್ಯ ವಲಯದ ಕ್ರೀಡಾ ವಸತಿ ಶಾಲೆ ಹಾಗೂ ನಿಲಯಕ್ಕೆ ಪ್ರವೇಶ ಪಡೆಯಲು ಇಚ್ಚಿಸುವವರು ನೇರವಾಗಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 9480796263(ನ್ಯಾಮತಿ), 789264149(ಹೊನ್ನಾಳಿ), 9480796263(ಚನ್ನಗಿರಿ), 9972464313(ಜಗಳೂರು), 9448667255 (ಹರಿಹರ), 9448667255, 9480796263, 9972464313, 9141091590, 8971388143 (ದಾವಣಗೆರೆ) ಮೊಬೈಲ್‍ಗೆ ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top