Connect with us

Dvgsuddi Kannada | online news portal | Kannada news online

ದಾವಣಗೆರೆ: ಬಿಇಐಟಿ ಕಾಲೇಜಿನಲ್ಲಿ ಡ್ರಗ್ಸ್ ಜಾಗೃತಿ; ಕ್ಷಣಿಕ ಸುಖಕ್ಕೆ ಕೆಟ್ಟ ವ್ಯಸನಗಳಿಗೆ ಬಲಿಯಾಗಬೇಡಿ; ಎಸ್ಪಿ

ದಾವಣಗೆರೆ

ದಾವಣಗೆರೆ: ಬಿಇಐಟಿ ಕಾಲೇಜಿನಲ್ಲಿ ಡ್ರಗ್ಸ್ ಜಾಗೃತಿ; ಕ್ಷಣಿಕ ಸುಖಕ್ಕೆ ಕೆಟ್ಟ ವ್ಯಸನಗಳಿಗೆ ಬಲಿಯಾಗಬೇಡಿ; ಎಸ್ಪಿ

ದಾವಣಗೆರೆ: ಡ್ರಗ್ಸ್, ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಾಗೃತಿ ಎಸ್ಪಿ ಉಮಾ ಪ್ರಶಾಂತ್ ಅವರು ದಾವಣಗೆರೆ ನಗರದ ಬಿಇಐಟಿ ಕಾಲೇಜಿನಲ್ಲಿ ನಡೆದ ಡ್ರಗ್ಸ್ ಜಾಗೃತಿ ಹಾಗೂ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕ್ಷಣಿಕ ಸುಖ/ಸಂತೋಷಕ್ಕಾಗಿ ಕೆಟ್ಟ ವ್ಯಸನಗಳಿಗೆ ಬಲಿಯಾಗದಿರಿ ಎಂದು ತಿಳಿಸಿದರು.

ದಾವಣಗೆರೆ ನಗರವು ಶೈಕ್ಷಣಿಕ ಕ್ಷೇತ್ರವಾಗಿದ್ದು, ಕೆಲ ವಿಧ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಕ್ಕೆ ದಾಸರಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೇ, ತಮ್ಮ ಜೀವನದ ಗುರಿ, ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಮಾದಕ ದ್ರವ್ಯ ವ್ಯಸನಕ್ಕೆ ದಾಸರಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು ಸಾಕಷ್ಟು ಇದ್ದಾವೆ. ಯುವಕರು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಅಭ್ಯಾಸ ಮಾಡಿ ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನಹರಿಸಬೇಕು. ನಿಮ್ಮ ಸುತ್ತಮುತ್ತ ಮಾದಕ ದ್ರವ್ಯ ವ್ಯಸನಕ್ಕೆ ದಾಸರಾಗಿರುವವರು, ಮಾದಕ ದ್ರವ್ಯ ವಸ್ತುಗಳನ್ನು ಮಾರಾಟ ಮಾಡುವವರು ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸರಿಗೆ ಗಮನಕ್ಕೆ ತರುವ ಮೂಲಕ ಜವಾಬ್ದಾರಿಯುತ ಯುವ ಪ್ರಜೆಗಳಾಗಬೇಕು ಎಂದರು.

ಸಾಮಾಜಿಕ ಜಾಲತಾಣಗಳ ಬಳಕೆ ಸಮಯದಲ್ಲಿ ಬಹಳ ಜಾಗರೂಕತೆ ವಹಿಸಿಬೇಕು, ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ, ಬ್ಲಾಕ್ ಮೇಲ್ ಮಾಡುವುದು ವಿಶೇಷವಾಗಿ ಮಹಿಳೆಯರಿಗೆ/ಯುವತಿಯರಿಗೆ ಅವರುಗಳ ಪೋಟೋಗಳನ್ನು ಹಾಗೂ ವಯಕ್ತಿಕ ಮಾಹಿತಿಗಳನ್ನು ಬಳಸಿಕೊಂಡು ಅವರುಗಳ ವಯುಕ್ತಿಕ ಜೀವನಕ್ಕೆ ದಕ್ಕೆ ಬರುವಂತೆ ಎಡಿಟ್ ಮಾಡಿ ಹಣಕ್ಕೆ ಬೇಡಿಕೆ ಇಡುವ, ಕಿರುಕುಳ ನೀಡುವ ಪ್ರಕರಣಗಳನ್ನು ಕಾಣಬಹುದಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಯಕ್ತಿಕ ಮಾಹಿತಿಯನ್ನು ಶೇರ್ ಮಾಡುವ ಮೊದಲು ಜಾಗರೂಕತೆ ವಹಿಸಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರೆöÊವೆಸಿ ಸೆಟ್ಟಿಂಗ್‌ಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಇತ್ತಿಚೀನ ದಿನಗಳಲ್ಲಿ ಸೈಬರ್ ಅಪರಾಧಗಳಿಗೆ ಒಳಗಾದ ಪ್ರಕರಣಗಳು ದಿನದಿಂದ ದಿನ ಹೆಚ್ಚುತ್ತಲೇ ಇವೆ ಕಾರಣ ನಾವುಗಳು ಸೈಬರ್ ಅಪರಾಧಗಳ ಬಗ್ಗೆ ಜಾಗ್ರತೆ/ ಜ್ಞಾನದ ಕೊರತೆಯಿಂದ, ನಾವು ನಮ್ಮ ವೈಯುಕ್ತಿಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅನಾಮಧೇಯ ವ್ಯಕ್ತಿಗಳು ಬ್ಯಾಂಕ್ ಅಧಿಕಾರಿಗಳೆಂದು ಕರೆ ಮಾಡಿದವರಿಗೆ ನಮ್ಮ ಬ್ಯಾಂಕ್ ಖಾತೆಗಳಿಗೆ ಸೇರಿದಂತೆ ವಯುಕ್ತಿಕ ಮಾಹಿತಿ ಹಂಚಿಕೊಳ್ಳುವ ಮೂಲಕ, ಮೊಬೈಲ್ ಗೆ ಬರುವ ಅನಾಮಧೇಯ ಲಿಂಕ್ಸ್ ಗಳನ್ನು ಒತ್ತಿ ಅವುಗಳನ್ನು ತೆರೆಯುವ ಮೂಲಕ, ಆಫರ್ ಅಥವಾ ಬಂಪರ್ ಲಕ್ಕಿ ಡ್ರಾ ಬಂದಿದೆ ಎಂದು ಅಮೀಶಗಳಿಗೆ ಬಲಿಯಾಗಿ ಅವುಗಳ ಹಿಂದೆ ಬೀಳುವ ಮೂಲಕ ತುಂಬಾ ಜನರು ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿರುವುದು ಪ್ರತಿದಿನ ಕಾಣುತ್ತೇವೆ ಇದಕ್ಕೆಲ್ಲಾ ಕಾರಣ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಹಾಗೂ ಅವುಗಳ ಬಗ್ಗೆ ಜಾಗ್ರತೆ ವಹಿಸದೆ ಇರುವುದಾಗಿದೆ. ಸೈಬರ್ ಅಪರಾಧಗಳಿಗೆ ಬಲಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಸೈಬರ್ ಅಪರಾಧಗಳಿಗೆ ಒಳಗಾಗದಿರಿ. ಹಾಗೇನಾದರೂ ಸೈಬರ್ ಅಪರಾಧಗಳಿಗೆ ಒಳಗಾದಲ್ಲಿ ಕೂಡಲೇ ಸೈಬರ್ ತುರ್ತು ಸಹಾಯವಾಣಿ 1930 ಗೆ ಕರೆ ಮಾಡಲು ತಿಳಿಸಿದರು.

ಸಾರ್ವಜನಿಕರ ಅನೂಕೂಲಕ್ಕಾಗಿಯೇ, ನೊಂದವರಿಗೆ ತುರ್ತು ನೆರವು ನೀಡಲು ಪೊಲೀಸ್ ತುರ್ತು ಸಹಾಯವಾಣಿ 112 ಜಾರಿಗೆ ತರಲಾಗಿದ್ದು, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸಂಧರ್ಭದಲ್ಲಿ ತುರ್ತು ಸಹಾಯವಾಣಿ 112 ಕರೆ ಮಾಡಿದರೆ ಕೂಡಲೇ ಪೊಲೀಸ್ ನೆರವು ನೀಡಲಾಗುವುದು. ಯಾವುದೇ ಅಪರಾಧಗಳು ಕಂಡು ಬಂದರೆ ಕೂಡಲೇ 112 ಕರೆ ಮಾಡಿ ಮಾಹಿತಿ ನೀಡಲು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಬಿಐಇಟಿ‌ ನಿರ್ದೇಶಕ ವೈ ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ.ಹೆಚ್.ಬಿ.ಅರವಿಂದ್, ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ‌ ಪ್ರಸಾದ್ ಪಿ, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top