ದಾವಣಗೆರೆ: ಕೆಎಸ್ಆರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರ ಬೇಜವಾಬ್ದಾರಿಯಿಂದ ಬಾಗಿಲ ಬಳಿ ಇಟ್ಟಿದ್ದ 10 ಸಾವಿರ ರೂ. ಮೌಲ್ಯದ ಆರೋಗ್ಯ ಕಿಟ್ ನೆಲಕ್ಕೆ ಬಿದ್ದಿದ್ದು, ಯುವತಿಯು ಚಾಲಕ, ನಿರ್ವಾಹಕರನ್ನು ತರಾಟೆ ತೆಗೆದುಕೊಂಡ ಘಟನೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.
ಚಿತ್ರದುರ್ಗದಿಂದ ಜಗಳೂರಿಗೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿನ ಬಾಗಿಲು ಬಳಿ ಇಟ್ಟ ಆರೋಗ್ಯ ಕಿಟ್ ನೆಲಕ್ಕೆ ಬಿದ್ದಿದೆ. ಆದರೆ, ಚಾಲಕ ಸಕಾಲಕ್ಕೆ ಬಸ್ ನಿಲ್ಲಿಸದೆ, ಒಂದು ಕಿಲೋ ಮೀಟರ್ ದೂರ ಬಂದ ಬಳಿಕ ನಿಲ್ಲಿಸಿದ್ದಾನೆ. ಕಿಟ್ ಕಳೆದುಕೊಂಡ ಯುವತಿ ಚಾಲಕ ಮತ್ತು ನಿರ್ವಹಕರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರ ಹಾಕಿದ್ದಾರೆ. ನಿಮ್ಮ ತಪ್ಪಿನಿಂದ ನಾನು 10 ಸಾವಿರ ಮೌಲ್ಯದ ಕಿಟ್ ಕಳೆದುಕೊಂಡಿದ್ದಾನೆ. ಇದನ್ನು ನಿಮ್ಮ ಕೈಯಲ್ಲಿ ಕೊಡಿಸಲು ಆಗುತ್ತಾ ….? ಎಂದು ಕಿಡಿಕಾರಿದ್ದಾಳೆ.



