ದಾವಣಗೆರೆ: ನಗರದ ಬ್ರಾಹ್ಮಣ ಸಮಾಜ ಸೇವಾ ಸಂಘ ಮಹಿಳಾ ವಿಭಾಗದಿಂದ ಗೀತಾ ಜಯಂತಿ ಅಂಗವಾಗಿ ಭಗವದ್ಗೀತೆ ಸ್ಪರ್ಧೆಯನ್ನು ಬರುವ ಡಿಸೆಂಬರ್ 10ರ ಭಾನುವಾರ ಬೆಳಿಗ್ಗೆ 10.30ಕ್ಕೆ ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯ ಶಾರದಾಂಬ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯ ವಿವರ : ಅಧ್ಯಾಯ ಹತ್ತರಲ್ಲಿ ವಿಭೂತಿ ಯೋಗಃ’ 1ರಿಂದ 6 ವರ್ಷದ ಮಕ್ಕಳಿಗೆ 5 ಶ್ಲೋಕ, 7 ರಿಂದ 12 ವರ್ಷದ ಮಕ್ಕಳಿಗೆ 12 ಶ್ಲೋಕ, 13 ರಿಂದ 18 ವರ್ಷದವರಿಗೆ 25 ಶ್ಲೋಕ ಹೇಳುವ ಸ್ಪರ್ಧೆ ಏರ್ಪಡಿಸಲಾಗಿದೆ. ವಿವರಕ್ಕೆ ಚಂದ್ರಶೇಖರ ಅಡಿಗ (9964027146), ನಳಿನಿ ಅಚ್ಯುತ್ (9886058866) ಸಂಪರ್ಕಿಸಬಹುದು.



