ದಾವಣಗೆರೆ: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ದಾವಣಗೆರೆ ವಲಯ ಕಚೇರಿ ವತಿಯಿಂದ ಬಂಜಾರ ಸಾಂಪ್ರದಾಯಿಕ ಕಸೂತಿ ಮತ್ತು ಪೂರಕ ಹೊಲಿಗೆ ತರಬೇತಿ ಕೈಗೊಳ್ಳಲು ನುರಿತ ಅರ್ಹ ನೋಂದಾಯಿತ ಸಂಘ, ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಸಂಘ, ಸಂಸ್ಥೆಗಳು ನವಂಬರ್ 4 ರೊಳಗಾಗಿ ದಾವಣಗೆರೆ ವಲಯ ಕಚೇರಿಗೆ ಭೇಟಿ ನೀಡಿ ನಿಗಮದ ನಿಗಧಿತ ಅರ್ಜಿ ನಮೂನೆ ಪಡೆದು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ವಲಯ ಕಚೇರಿಯನ್ನು ಸಂಪರ್ಕಿಸಲು ನಿಗಮದ ದಾವಣಗೆರೆ ವಲಯ ಕಚೇರಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.



