ದಾವಣಗೆರೆ: ಅ.14 ರಂದು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಟ್ರಸ್ಟ್ ಪ್ರತಿಷ್ಠಾಪಿಸಿರುವ ಶ್ರೀ ಗಣಪತಿ ಮೂರ್ತಿ ವಿಸರ್ಜನೆ ಹಾಗೂ ಬೃಹತ್
ಶೋಭಾಯಾತ್ರೆ ನಡೆಯಲಿದೆ. ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಹೆಚ್ಚಿನ ಜನ ಸೇರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗುವ ಕಾರಣ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಅ.14 ರಂದು ಬೆಳಗ್ಗೆ 6.00 ರಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ದಾವಣಗೆರೆ ನಗರದ ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್‍ನಿಲ್ದಾಣಗಳಿಗೆ ಬರುವ ಬಸ್‍ಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ನಿಲುಗಡೆ ಮಾಡಿಕೊಂಡು ಅಲ್ಲಿಂದಲೇ ವಾಪಸ್ ತೆರಳಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಆದೇಶಿಸಿದ್ದಾರೆ.
ಹಿಂದೂ ಮಹಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯು ಎ.ವಿ.ಕೆ ರಸ್ತೆ, ಚೇತನ್ ಹೋಟೆಲ್ ಎಡಭಾಗದಿಂದ ಅಂಬೇಡ್ಕರ್ ವೃತ್ತ, (ಮುಸ್ಲಿಂ ಹಾಸ್ಟೇಲ್ ಕಾಂಪ್ಲೆಕ್ಸ್), ಜಯದೇವ ಸರ್ಕಲ್, ಲಾಯರ್ ರಸ್ತೆ, ಪಿ.ಬಿ .ರಸ್ತೆ, ಗಾಂಧಿ ವೃತ್ತ, ಹಳೇ ಬಸ್ ನಿಲ್ದಾಣ, ಅರಸು ಕ್ರಾಸ್, ಮಹಾನಗರ ಪಾಲಿಕೆ, ರಾಣಿ ಚೆನ್ನಮ್ಮ ವೃತ್ತ, ಈದ್ಗಾ ಮೈದಾನ (ಖಬರಸ್ಥಾನ್), ಮದೀನ ಮಸೀದಿ, ಕೋರ್ಟ್ ವೃತ್ತದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬಂದು ಮೆರವಣಿಗೆಯನ್ನು ಮುಕ್ತಾಯ ಮಾಡಿ ನಂತರ ಗಣೇಶ ಮೂರ್ತಿಯನ್ನು ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಮಾರ್ಗ ಬದಲಾವಣೆ ವಿವರ: ಚನ್ನಗಿರಿ ರಸ್ತೆ ಕಡೆಯಿಂದ ಬರುವ ಬಸ್‍ಗಳು – ಹದಡಿ ರಸ್ತೆಯಲ್ಲಿರುವ ಶ್ರೀ ಮಾಗನೂರು ಬಸಪ್ಪ ಮೈದಾನದಲ್ಲಿ ನಿಲುಗಡೆ ಮಾಡಿಕೊಂಡು ನಿರ್ಗಮಿಸುವುದು. ಜಗಳೂರು ಕಡೆಯಿಂದ ಬರುವ ಬಸ್‍ಗಳು- ಕೆ.ಆರ್.ರಸ್ತೆ ಗಣೇಶಗುಡಿ ಪಕ್ಕದಲ್ಲಿರುವ ಜಗಳೂರು ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿಕೊಂಡು ನಂತರ ಆರ್‍ಎಂಸಿ ಯಾರ್ಡ್ ರಸ್ತೆ ಮೂಲಕ ಪ್ರೈ ಓವರ್ ಹತ್ತಿರ ಬಂದು ವಾಪಾಸ್ ಅದೇ ಮಾರ್ಗವಾಗಿ ಹೋಗುವುದು. ಚಿತ್ರದುರ್ಗ ಮತ್ತು ಸಂತೇಬೆನ್ನೂರು ಬೀರೂರು ಸಮ್ಮಸಗಿ ರಸ್ತೆಯಿಂದ ಬರುವ ಬಸ್‍ಗಳನ್ನು ದಾವಣಗೆರೆ ನಗರದ ನಿರ್ಮಾಣ ಹಂತದಲ್ಲಿರುವ ಹೊಸ ಕೆಎಸ್‍ಆರ್‍ಟಿಬಸ್ ನಿಲ್ದಾಣಕ್ಕೆ ಬಂದು ವಾಪಾಸ್ ಬಾಡ ಕ್ರಾಸ್ ನ ರಸ್ತೆ ಮೂಲಕ ಹರಿಹರ, ಹಾವೇರಿ ಕಡೆಗೆ ಹೋಗುವುದು, ಹರಿಹರ ಮತ್ತು ಶಾಮನೂರು ಕಡೆಯಿಂದ ಬರುವ ವಾಹನಗಳನ್ನು ದಾವಣಗೆರೆ ನಗರದ ಎಸಿಬಿ ಕಛೇರಿ ಎದುರುಗಡೆ ರಿಂಗ್ ರಸ್ತೆಯಲ್ಲಿರುವ ಎರಡು ಖಾಲಿ ಜಾಗದಲ್ಲಿ ನಿಲುಗಡೆ ಮಾಡಿಕೊಂಡು ನಿರ್ಗಮಿಸಬೇಕೆಂದು ತಿಳಿಸಲಾಗಿದೆ.