ದಾವಣಗೆರೆ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ದಾವಣಗೆರೆಯಲ್ಲಿ ಶ್ರೀರಾಮ ಜ್ಯೋತಿ ರಥಯಾತ್ರೆ ಸಂದರ್ಭದಲ್ಲಿ ನಡೆದ ಕೋಮುಗಲಭೆಯಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ 15 ಕೆ. ಜಿ. ಬೆಳ್ಳಿ ಇಟ್ಟಿಗೆಯನ್ನು ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣ ಸಮಿತಿಗೆ ಸಮರ್ಪಿಸಲು ನಿರ್ಧರಿಸಿದ್ದು, ಅ. 6ರಂದು ಬೆಳ್ಳಿ ಇಟ್ಟಿಗೆ ಸಮರ್ಪಣಾ ಸಮಾರಂಭ ಆಯೋಜಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ನಗರದ ಪಿ. ಬಿ. ರಸ್ತೆಯಲ್ಲಿನ ಅಭಿನವ ರೇಣುಕಾ ಮಂದಿರದಲ್ಲಿ ಅ. 6ರಂದು ಬೆಳ್ಳಿ ಇಟ್ಟಿಗೆ ಸಮರ್ಪಣಾ ಸಮಾರಂಭ ನಡೆಯಲಿದೆ.ಅಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ಸಾನಿಧ್ಯವನ್ನು ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ವಹಿಸಲಿದ್ದು, ಮಾಜಿ ಸಚಿವ ಸಿ. ಟಿ. ರವಿ ಆಗಮಿಸಲಿದ್ದಾರೆ. ಸಂಸದ ಜಿ. ಎಂ. ಸಿದ್ದೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಸ್. ಎ. ರವೀಂದ್ರನಾಥ್, ಶಾಸಕ ಬಿ. ಪಿ. ಹರೀಶ್, ಹಿಂದೂ ಸಂಘಟನಾ ಪ್ರಮುಖರಾದ ಕೆ. ಬಿ. ನಾರಾಯಣ್ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.
1990 ರ ಅಕ್ಟೋಬರ್ ನಲ್ಲಿ ದಾವಣಗೆರೆಗೆ ಶ್ರೀರಾಮ ಜ್ಯೋತಿ ರಥಯಾತ್ರೆ ಆಗಮಿಸಿದಾಗ ಕೆಲ ಕಿಡಿಗೇಡಿಗಳಿಂದ ಕೋಮುಗಲಭೆ ನಡೆದು, ಗೋಲಿಬಾರ್ ನಲ್ಲಿ 8 ಮಂದಿ ಹುತಾತ್ಮರಾದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ
ಅವರ ಆಸೆಯಾಗಿತ್ತು. ಅದು ಈಗ ನೆರವೇರುತ್ತಿದ್ದು, ಅವರ ಸ್ಮರಣಾರ್ಥ ಅವರ ಹೆಸರು, ಶ್ರೀರಾಮ ಮಂದಿರ ಹಾಗೂ ಶ್ರೀ ರಾಮನ ಚಿತ್ರವನ್ನು ಬೆಳ್ಳಿ ಇಟ್ಟಿಗೆ ಮೇಲೆ ಕೆತ್ತಿಸಲಾಗಿದೆ ಎಂದರು.
ರಥಯಾತ್ರೆಯ ದಾವಣಗೆರೆ ನಡೆದ ಘಟನೆಯಲ್ಲಿ ಹುತಾತ್ಮರಾದ ಕುಟುಂಬದವರಿಗೆ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿದ್ದು, 70 ಮಂದಿ ಗುರುತಿಸಲಾಗಿದೆ. ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಉಡುಪಿಯ ಪೇಜಾಮರ ಮಠಾಧೀಶರು ರಾಮ ಮಂದಿರ ಟ್ರಸ್ಟ್ ನಲ್ಲಿದ್ದು, ಅವರ ಮೂಲಕ ತಲುಪಿಸಬೇಕೋ ಅಥವಾ ನೇರವಾಗಿ ನಾವೇ ಹೋಗೇ ತಲುಪಿಸಬೇಕಾ ಎಂಬುದು ನಿರ್ಧಾರ ಆಗಿಲ್ಲ. ಶ್ರೀಗಳ ಜೊತೆ ಚರ್ಚೆ ನಡೆಸಿದ ಬಳಿಕ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಸಮರ್ಪಣಾ ಸಮಾರಂಭದ ಪ್ರಯುಕ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅ. 4ರಂದು ಬೈಕ್ ರ್ಯಾಲಿ ಆಯೋಜಿಸಲಾಗಿದ್ದು, ಬೆಳಿಗ್ಗೆ 11ಕ್ಕೆ ಬೇತೂರು ರಸ್ತೆಯಲ್ಲಿನ ವೆಂಕಟೇಶ್ವರ ವೃತ್ತದಿಂದ ಆರಂಭಗೊಳ್ಳಲಿದೆ.
ಇಲ್ಲಿಂದ ಆರಂಭಗೊಂಡು ಬಂಬೂಬಜಾರ್, ವಿಠ್ಠಲ ಮಂದಿರ, ಕೆ.ಆರ್.ರಸ್ತೆ, ಮಂಡಿಪೇಟೆ, ಗಡಿಯಾರ ಕಂಬ, ಬಿಎಸ್ ಸಿ ಅಂಗಡಿಯ ವೃತ್ತ, ಹಗೇದಿಬ್ಬ ವೃತ್ತ, ದುರ್ಗಾಂಬಿಕ ದೇವಸ್ಥಾನ, ವೀರ ಹೊಂಡದ ವೃತ್ತ, ಅರುಣಾ ಚಿತ್ರ ಮಂದಿರ ವೃತ್ತದಿಂದ ರೇಣುಕಾ ಮಂದಿರ ತಲುಪಿ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ರಾಜು ನೀಲಗುಂದ, ಟಿಂಕರ್ ಮಂಜಣ್ಣ, ಕಿಶೋರ್ ಕುಮಾರ್, ಬೇತೂರು ಬಸವರಾಜ್, ರಮೇಶ್ ನಾಯಕ್, ಕುಮಾರ್, ಹೆಚ್. ಬಿ. ನವೀನ್, ಅಮರ್, ಪಿ. ಸಿ. ಶ್ರೀನಿವಾಸ್ ಭಟ್ ಮತ್ತಿತರರ.