ದಾವಣಗೆರೆ: ಹರಿಹರ ಉಪನೋಂದಣಿ ಕಚೇರಿ ವ್ಯಾಪ್ತಿಯ ಹರಿಹರ ನಗರಸಭೆ, ಮಲೇಬೆನ್ನೂರು ಪುರಸಭೆ ಹಾಗೂ ಗ್ರಾಮಾಂತರ ಪ್ರದೇಶದ ಕೃಷಿ ಜಮೀನು ಹಾಗೂ ಕೃಷಿಯೇತರ ಆಸ್ತಿಗಳ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಿಸುವ ಸಲುವಾಗಿ ಸೆಪ್ಟೆಂಬರ್ 8 ರಂದು ತಹಶೀಲ್ದಾರ್ ಹಾಗೂ ತಾಲ್ಲೂಕು ಮೌಲ್ಯಮಾಪನ ಉಪಸಮಿತಿ, ಅಧ್ಯಕ್ಷ ಪೃಥ್ವಿ ಸ್ಥಾನಿಕಂ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿದೆ.
ಸಭೆಯಲ್ಲಿ ಸರ್ಕಾರಿ ಅಂದಾಜು ಮಾರ್ಗಸೂಚಿ ಬೆಲೆಗಳನ್ನು 2023-24ನೇ ಸಾಲಿನಲ್ಲಿ ಪರಿಷ್ಕರಿಸುವ ಸಂಬಂಧ ಚರ್ಚಿಸಿ, ಸರ್ವ ಸದಸ್ಯರ ಅಭಿಪ್ರಾಯದಂತೆ ಚಾಲ್ತಿ ಇರುವ ಮಾರ್ಗಸೂಚಿ ಬೆಲೆ 2019-20ನೇ ಸಾಲಿನಲ್ಲಿ ಪರಿಷ್ಕೃತಗೊಂಡಿದ್ದು, ನಂತರದಲ್ಲಿ
ಪರಿಷ್ಕರಣೆಗೊಂಡಿರುವುದಿಲ್ಲ. ಆದ್ದರಿಂದ ಚಾಲ್ತಿ ದರಗಳ ಪರಿಷ್ಕರಣೆ ಮಾಡುವುದು ಸೂಕ್ತವೆಂದು ತೀರ್ಮಾನಿಸಿ ಸೆಪ್ಟೆಂಬರ್ 10 ರಿಂದ 14 ದಿನದೊಳಗೆ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಮತ್ತು ಸೂಚನೆಗಳನ್ನು ದಾಖಲಾತಿಗಳ ಆಧಾರಗಳ ಮೇಲೆ ಸಕಾರಣಗಳೊಂದಿಗೆ ತಮ್ಮ
ಅಹವಾಲುಗಳನ್ನು ಲಿಖಿತ ರೂಪದಲ್ಲಿ ತಹಶೀಲ್ದಾರ್, ಉಪನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು.



