ದಾವಣಗೆರೆ: ಜಿಲ್ಲಾ ಮೀನುಗಾರಿಕೆ ಇಲಾಖೆ ವತಿಯಿಂದ 2023-24 ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಲಾಗಿದೆ.
ಮೀನು ಕೃಷಿ ಕೊಳಗಳ ನಿರ್ಮಾಣ-10 ಹೆ, ಮೀನು ಕೃಷಿಕೊಳದ ಹೂಡಿಕೆ ವೆಚ್ಚಕ್ಕೆ ಸಹಾಯ-10 ಹೆ, ಸಿಹಿ ನೀರು ಬಯೋಫ್ಲಾಕ್ ಘಟಕ ಸ್ಥಾಪನೆಗೆ ಸಹಾಯಧನ-1, ಇನ್ಸುಲೇಟೆಡ್ (ಶಾಖನಿರೋಧಕ) ವಾಹನ ಖರೀದಿಗೆ ಸಹಾಯಧನ-1 ಹಾಗೂ ಯಾಂತ್ರೀಕೃತ ದೋಣಿ ಖರೀದಿಗೆ-2 ರಂತೆ ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪ್ರಾರಂಭಿಸಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40% ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ. 60% ರಷ್ಟು ಸಹಾಯಧನ ನೀಡಲಾಗುತ್ತದೆ.
ಆಸಕ್ತರು ಆಗಸ್ಟ್ 22 ರೊಳಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿಗಳನ್ನು ಪಡೆದು ಸಲ್ಲಿಸಲು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಅಣ್ಣಪ್ಪಸ್ವಾಮಿ ತಿಳಿಸಿದ್ದಾರೆ.



