ದಾವಣಗೆರೆ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಾರ್ವಜನಿಕರಿಗೆ ಮುಖ್ಯ ಮಾಹಿತಿ ನೀಡಿದ್ದು, ಈ ತಿಂಗಳ ಪಡಿತರ ಪಡೆಯುವ ವೇಳೆ ರೇಷನ್ ಕಾರ್ಡ್ , ಜಾತಿ ಪ್ರಮಾಣ ಜೆರಾಕ್ಸ್ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿಸಲಾಗಿದೆ.
ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಎಸ್.ಸಿ, ಎಸ್.ಟಿ ಪಡಿತರ ಚೀಟಿದಾರರ ಕುಟುಂಬದ ಮಾಹಿತಿಯನ್ನು ಆಗಸ್ಟ್ ತಿಂಗಳ ಪಡಿತರ ವಿತರಿಸುವ ಸಂದರ್ಭದಲ್ಲಿ ಪಡಿತರ ಚೀಟಿಯ ಜೆರಾಕ್ಸ್ ಹಾಗೂ AJSK ವತಿಯಿಂದ ನೀಡಿರುವ ಜಾತಿ ಪ್ರಮಾಣದ ಜೆರಾಕ್ಸ್ ಪ್ರತಿಯನ್ನು ನೀಡಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



