ದಾವಣಗೆರೆ: ದಕ್ಷಿಣ ಕೋರಿಯ ದೇಶದಲ್ಲಿ ಆಗಸ್ಟ್ 1ರಿಂದ 12ರ ವರೆಗೆ ನಡೆಯಲಿರುವ 25ನೇ ವಿಶ್ವ ಸ್ಕೌಟ್ ಜಾಂಬೂರಿಯಲ್ಲಿ ದಾವಣಗೆರೆ ಜಿಲ್ಲೆಯಿಂದ ಶ್ರೀ ತರಳಬಾಳು ಜಗದ್ಗುರು ಶಾಲೆಯ ವಿದ್ಯಾರ್ಥಿನಿ ಗೈಡ್ ಶ್ರೀರಕ್ಷ ಕೆ. ಭಾಗವಹಿಸಲಿದ್ದಾರೆ.
ಜಾಂಬೂರಿಯಲ್ಲಿ ಅಂತರಾಷ್ಟ್ರೀಯ ಸೇವಾ ತಂಡದ ಸದಸ್ಯರಾಗಿ ಹರಿಹರದ ಸೆಂಟ್ ಮೇರಿಸ್ ಕಾನ್ವೆಂಟ್ ಶಾಲೆಯ ಹಿರಿಯ ವಿದ್ಯಾರ್ಥಿ ವಿಜಯ್ ಕುಮಾರ್ ಬಿ.ಪಿ ಹಾಗೂ ಮೇಳದಲ್ಲಿ ವಿಶ್ವದಾಧ್ಯಂತ 216 ದೇಶಗಳಿಂದ ಸ್ಕೌಟ್ ಗೈಡ್ ಮಕ್ಕಳು ವಿವಿಧ ಸಾಂಸ್ಕøತಿಕ ಮತ್ತು ಕೌಶಲ್ಯಾಧಾರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಎಂದು ಜಿಲ್ಲಾ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



