ದಾವಣಗೆರೆ: ರಿಯಾಯಿತಿ ದರದಲ್ಲಿ ಇ-ಸ್ಟೋರ್ ಸ್ಥಾಪಿಸಿ ಸಾಮಗ್ರಿ ನೀಡುವ ಆಮಿಷವೊಡ್ಡಿ ಅಂದಾಜು 2 ಕೋಟಿ ವಂಚಿಸಿರುವ ಪ್ರಕರಣ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಏಪ್ರಿಲ್ ತಿಂಗಳಲ್ಲಿ ಕೆಲವರಿಗೆ ಇ-ಸ್ಟೋರ್ ಮಾಡಿಕೊಟ್ಟಿದ್ದು, ಇದೇ ರೀತಿ ರಿಯಾಯಿತಿ ದರದಲ್ಲಿ ಇ-ಸ್ಟೋರ್ ಆರಂಭಿಸಿ ಸಾಮಗ್ರಿ ನೀಡುವ ಆಮಿಷವೊಡ್ಡಿ ಹಣ ಸಂಗ್ರಹಿಸಿ/ವಂಚಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಇದೇ ರೀತಿ ವಂಚನೆ ಪ್ರಕರಣ ನಡೆದಿರುವುದು ಕಂಡುಬಂದಿದೆ. ವಂಚನೆಗೊಳಗಾದವರಿಗೂ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮಾಹಿತಿ ನೀಡಿದ್ದಾರೆ.



