ದಾವಣಗೆರೆ: ಲಾರಿಗಳಿಗೆ ಪೀಕ್ ಅವರ್ ನಲ್ಲಿ ದಾವಣಗೆರೆ ನಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಎಸ್ ಪಿ.ಅರುಣ್ ಕೆ ತಿಳಿಸಿದ್ದಾರೆ.
ಬೆಳಿಗ್ಗೆ 9 ರಿಂದ 11 ರವರೆಗೆ ಮತ್ತು ಸಂಜೆ 4 ರಿಂದ 6 ರವರೆಗೆ ಲಾರಿಗಳು ನಗರ ಪ್ರವೇಶಕ್ಕೆ ಅವಕಾಶವಿಲ್ಲ. ಈ ಪೀಕ್ ಅವರ್ಸ್‌ಗಳಲ್ಲಿ ಅಗತ್ಯ ವಸ್ತು ಪೂರೈಕೆಯ ಗ್ಯಾಸ್, ಪೆಟ್ರೋಲ್ ಮತ್ತು ಡಿಸಿಯಿಂದ ವಿಶೇಷ ಅನುಮತಿ ಪಡೆದ ಲಾರಿಗಳನ್ನು ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.
ಪೀಕ್ ಅವರ್ ನಲ್ಲಿ ಲಾರಿ ನಿಲುಗಡೆ ಪಾಯಿಂಟ್‌ಗಳು; ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ1) ಬಾಡ ಕ್ರಾಸ್ 2)ಜಿಎಂಐಟಿ ಕಾಲೇಜು 3) ಮಾಗನಹಳ್ಳಿ ರಸ್ತೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ 1) ಶಾಮನೂರು ಅಂಡರ್ ಪಾಸ್ 2) ಲೋಕಿಕೆರೆ ಕ್ರಾಸ್ 3) ಡಿಸಿಎಂ ಅಂಡರ್ ಪಾಸ್ ಆಗಿದೆ ಎಂದು ತಿಳಿಸಿದ್ದಾರೆ.