ದಾವಣಗೆರೆ: ಸರ್ಕಾರಿ ಶಾಲೆಯ ಮೇಲ್ಛಾವಣಿಯಲ್ಲಿ ನಾಗರ ಹಾವು ಪತ್ತೆಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆತಂಕಗೊಂಡಿದ್ದರು. ಈ ಘಟನೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ನಡೆದಿದ್ದು, ತಕ್ಷಣ ಸ್ಥಳಕ್ಕೆ ಬಂದ ಉರಗ ತಜ್ಞರು ನಾಗರ ಹಾವು ರಕ್ಷಿಸಿದ್ದಾರೆ.
ಇಂದಿನಂತೆ ಬೆಳಗ್ಗೆ ಶಾಲೆ ಪ್ರಾರಂಭವಾಗಿದೆ. ಆಗ ನಾಗರ ಹಾವೊಂದು ಮೇಲ್ಛಾವಣಿಯಲ್ಲಿರುವು ಗೊತ್ತಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆತಂಕದಿಂದ ಶಾಲೆಯಿಂದ ಹೊರ ಬಂದಿದ್ದಾರೆ. ಕೂಡಲೇ ಎಸ್ ಡಿಎಂಸಿ ಅಧ್ಯಕ್ಷ ಹಾಗೂ ಊರಿನ ಜನರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಉರಗ ತಜ್ಞರನ್ನು ಕರೆಸಿ ಮೇಲ್ಛಾವಣಿಯಿಂದ ಹಾವನ್ನು ರಕ್ಷಣೆ ಮಾಡಿ, ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.



