ದಾವಣಗೆರೆ; ಬೇಸಿಗೆ ಹಂಗಾಮಿಗೆ ಮೇ 18 ರಿಂದ ಭದ್ರಾ ನಾಲೆಗೆ ಹರಿಸುತ್ತಿದ್ದ ನೀರನ್ನು ನಿಲುಗಡೆ ಮಾಡಲು ತೀರ್ಮಾನಿಸಿದೆ. ಕೊನೆಯ ಭಾಗದ ಭತ್ತದ ಬೆಳೆ ಹಾಗೂ ತೋಟದ ಬೆಳೆಗಳಿಗೆ ನೀರಿನ ಅವಶ್ಯಕತೆ ಇದ್ದು ಮೇ 25ರವರೆಗೆ ಹರಿಸುವಂತೆ ಕೊನೆಯ ಭಾಗದ ರೈತರು ಹರಿಹರ ತಾಲೂಕಿನ ಮಲೇಬೆನ್ನೂರಿನ ನೀರಾವರಿ ಇಲಾಖೆ ಇಂಜಿನಿಯರ್ ಗಳಿಗೆ ಮನವಿ ಮಾಡಿದ್ದಾರೆ.
ಮಳೆ ಬರದಿರುವ ಕಾರಣ ಭದ್ರಾ ಅಚ್ಚುಕಟ್ಟಿನ ಕೊನೆಯ ಭಾಗದ ಭತ್ತದ ಬೆಳೆ ಹಾಗೂ ತೋಟದ ಬೆಳೆಗಳಿಗೆ ನಾಲೆ ನೀರಿನ ಅವಶ್ಯಕತೆ ಇದೆ. ಹೀಗಾಗಿ ನೀರಿನ ಹರಿವು ಮುಂದುವರಿಸಬೇಕು ಎಂದು ಆಗ್ರಹಿಸಿದರು. ಎಂಜಿನಿಯರ್‌ಗಳು ರೈತರ ಮನವಿಯನ್ನು ಸ್ವೀಕರಿಸಿ, ಮೇಲಧಿಕಾರಿಗಳಿಗೆ ಕಳುಹಿಸಿದ್ದಾರೆ.



