ದಾವಣಗೆರೆ: ಕರ್ತವ್ಯ ಲೋಪವೆಸಗಿದ ಆರೋಪದಡಿ ಹಾಸ್ಟೆಲ್ ವಾರ್ಡನ್ ಸುಧಾ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರ ವನ್ನು ಧ್ವಜಸ್ಥಂಭದ ಹತ್ತಿರ ಇಡದೇ ಕರ್ತವ್ಯ ಲೋಪವೆಸಗಿ ರಾಷ್ಟ್ರೀಯ ಹಬ್ಬಕ್ಕೆ ಅಗೌರವ ಉಂಟು ಮಾಡಿದ ಆರೋಪದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಾರ್ಡನ್ ಕೆ.ಸಿ. ಸುಧಾ ಅಮಾನತ್ತುಗೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂ, ಶಿಸ್ತು ಪ್ರಾಧಿಕಾರಿ ಡಾ. ಎ.ಚನ್ನಪ್ಪ ಅಮಾನತ್ತು ಮಾಡಿದ್ದಾರೆ.