ದಾವಣಗೆರೆ: ಪಂಚ ಪೀಠಗಳಲ್ಲಿ ಕರ್ನಾಟಕದಲ್ಲಿರೋದು ಒಂದೇ ಪೀಠ. ಅದು ರಂಭಾಪುರಿ ಪೀಠ ಮಾತ್ರ. ರಾಜ್ಯದ ಉಜ್ಜೈನಿ ಪೀಠ ಮೂಲ ಪೀಠವಲ್ಲ, ಅದು ನಡುವೆ ಬಂದ ಪೀಠ. ಮೂಲ ಪೀಠ ಇರುವುದು ಮಧ್ಯಪ್ರದೇಶದ ಉಜ್ಜೈನಿಯಲ್ಲಿದೆ. ಮೊದಲು ಅದನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಹಿಮವತ್ಕೇದಾರ ಜಗದ್ಗುರು ಭೀಮಾ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹರಿಹರ ತಾಲ್ಲೂಕಿನ ಶಿವನಹಳ್ಳಿಯಲ್ಲಿ ನಡೆದ ಕೇದಾರ ವೈರಾಗ ಧಾಮದಲ್ಲಿ ಹಿಮಗಿರಿ ಭವನ ಉದ್ಘಾಟಿಸಿ ಮಾತಮಡಿದರು. ಉತ್ತರದಲ್ಲಿ ಕೇದಾರ, ದಕ್ಷಿಣದಲ್ಲಿ ರಂಭಾಪುರಿ ಫೀಠ. ಈ ಎರಡು ಮಠದ ನಡುವೆ ಉತ್ತಮ ಅವಿನಾಭಾವ ಬಂಧವಿದೆ. ಉಜ್ಜೈನಿ ಪೀಠ ಏನು ಎಂದು ಭಕ್ತರು ಪ್ರಶ್ನಿಸಬಹುದು. ಅದು ಮೂಲ ಪೀಠವಲ್ಲ, ನಡುವೆ ಬಂದಿರುವುದು. ಈ ಪೀಠ ಓಡಿ ಬಂದ ಮಹಿಳೆ ಇದ್ದಂತೆ ಎಂದು ಹಿಂದಿನ ಶ್ರೀ ಸಿದ್ಧಲಿಂಗ ಶಿವಾಚಾರ್ಯರ ಮಾತು. ಈ ಬಗ್ಗೆ ಪುರಾವೆ, ಪತ್ರಗಳಿವೆ. ಮೂಲ ಪೀಠ ಇರುವುದು ಮಧ್ಯಪ್ರದೇಶದ ಉಜ್ಜೈನಿಯಲ್ಲಿದೆ. ಮೊದಲು ಅದನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ತಿಳಿಸಿದರು.
ಪಂಚ ಪೀಠಗಳಲ್ಲಿ ಉತ್ತರಖಂಡದ ಕೇದಾರ ಪೀಠ, ಮಧ್ಯಪ್ರದೇಶದ ಉಜ್ಜೈನಿ ಪೀಠ, ಉತ್ತರ ಪ್ರದೇಶದ ಕಾಶಿ, ಕರ್ನಾಟಕದ ರಂಭಾಪುರಿ ಪೀಠ, ಆಂಧ್ರಪ್ರದೇಶ ಶ್ರೀಶೈಲ ಪೀಠ. ಈ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದರು.



