ದಾವಣಗೆರೆ; ರಾಮಕೃಷ್ಣ ಮಿಷನ್ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಜ.12 ರಂದು ನಗರದಲ್ಲಿ ಶೋಭಾಯಾತ್ರೆ ಹಮ್ಮಿಕೊಂಡಿದೆ. ಬೆಳಗ್ಗೆ 9ರಿಂದ ಅಮರ್ ಜವಾನ್ ಉದ್ಯಾನವನದಿಂದ ರಾಮಕೃಷ್ಣ ಮಿಷನ್ ವರೆಗೆ ಶೋಭಾಯಾತ್ರೆ ನಡೆಯಲಿದೆ. ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ ಸಿ ಶಿವಯೋಗಿ ಸ್ವಾಮಿ, ಉದ್ಯಮಿ ಜಯರುದ್ರೇಶ್ ಹಾಗೂ ಸಪ್ತಗಿರಿ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಾದ ಡಾ. ಮಹಂತೇಶ್ ಭಾರತಿ ಭಾಗವಹಿಸಲಿದ್ದಾರೆ. ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶೋಭಾಯಾತ್ರೆ ಯಶಸ್ವಿಗೊಳಿಸಬೇಕು ಎಂದು ಕೋರಲಾಗಿದೆ.