ದಾವಣಗೆರೆ: ಜಿಲ್ಲೆಯಲ್ಲಿ ನೂತನವಾಗಿ ಟ್ರಾಫಿಕ್ ಮ್ಯಾನೆಜ್‍ಮೆಂಟ್ ಸೆಲ್ ಓಪನ್ ಆಗಿದ್ದು, ದಾವಣಗೆರೆ ಕೇಂದ್ರ ಸ್ಥಾನ, ಹರಿಹರ, ಹೊನ್ನಾಳಿ, ಚನ್ನಗಿರಿ ಮತ್ತು ಜಗಳೂರುಗಳಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ತಡೆಗಟ್ಟಲು ಈ ಸೆಲ್ ತೆರೆಯಲಾಗಿದೆ.
ನಗರದ ಪೊಲೀಸ್ ಉಪ ವಿಭಾಗ ಕಚೇರಿಯಲ್ಲಿ ಟ್ರಾಫಿಕ್ ಮ್ಯಾನೆಜ್‍ಮೆಂಟ್ ಸೆಲ್ ತೆರೆಯಲಾಗಿದ್ದು, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಕಡಿಮೆ ಮಾಡುವುದರೊಂದಿಗೆ ಸಾರ್ವಜನಿಕರು ಪಾಲ್ಗೊಳ್ಳುವ ನೂತನ ವ್ಯವಸ್ಥೆ ಇದರಲಿದೆ.
ಸಾರ್ವಜನಿಕರು www.davangerepolice.karnataka.gov.in ವೆಬ್‍ಸೈಟ್‍ಗೆ ಭೇಟಿ ನೀಡಿ ವಾಹನ ಸವಾರರ ತಪ್ಪುಗಳ ಬಗ್ಗೆ ಸಾರ್ವಜನಿಕರ, ಸಂಚಾರಿ ನಿಯಮಗಳ ಉಲ್ಲಂಘನೆ ಸ್ಥಳದ ಪೊಟೋ ತೆಗೆದು ಜೊತೆಗೆ ಮಾಹಿತಿ ನೀಡಬಹುದು. ಇದರೊಂದಿಗೆ ಸಾರ್ವನಿಕರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ತಡೆಗಟ್ಟುವ ನೂತನ ವ್ಯವಸ್ಥೆಯಲ್ಲಿಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.



