ದಾವಣಗೆರೆ: ಬ್ಯಾಂಕ್ ಖಾತೆಯಲ್ಲಿ ದೊಡ್ಡ ಪ್ರಮಾಣ ಹಣ ಇಟ್ಟು, ಹಣ ಬ್ಯಾಂಕ್ ಖಾತೆಯಲ್ಲಿದ್ರೆ ಸೇಫ್ ಅಂತಾ ನೀವು ಅಂದ್ಕೊಂಡ್ರೇ ಅದು ನಿಮ್ಮ ತಪ್ಪು ಕಲ್ಪನೆ. ಇಂತಹ ದೊಡ್ಡ ಮಟ್ಟದ ಹಣ ಖಾತೆಯನ್ನೇ ಕಾಯುತ್ತಿರುವ ಆನ್ ಲೈನ್ ಸೈಬರ್ ವಂಚಕರು ಕ್ಷಣ ಮಾತ್ರದಲ್ಲಿಯೇ ನಿಮ್ಮ ಹಣ ದೋಚುವ ಚಾಣಾಕ್ಷತನ ಹೊಂದಿದ್ದಾರೆ.
ದಾವಣಗೆರೆ ವ್ಯಕ್ತಿಯೊಬ್ಬರು 52 ಲಕ್ಷದಷ್ಟು ಹಣ ಬ್ಯಾಂಕ್ ಖಾತೆಯಲ್ಲಿ ಇಟ್ಟಿದ್ದರು. ಆದರೆ, ವಂಚಕರು ಕ್ಷಣಮಾತ್ರದಲ್ಲಿಯೇ ನೆಟ್‌ಬ್ಯಾಂಕ್ ಮೂಲಕ ಹಣ ದೋಚಿದ್ದರು. ಇದೀಗ ಈ ಪ್ರಕರಣದ ಅಂತರರಾಜ್ಯ ಸೈಬರ್ ವಂಚಕನನ್ನು ದಾವಣಗೆರೆಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಶಾಂತಿಗ್ರಾಮದ ಸೈಬರ್ ವಂಚಕ ಸೈಯದ್ ಅರ್ಫಾತ್ ಎಂಬುವನನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ.
ಕ್ಷಣಾರ್ಧದಲ್ಲಿ 52 ಲಕ್ಷ ಮಾಯ..!!
ದಾವಣಗೆರೆಯ ನಿಟುವಳ್ಳಿಯ ಎಚ್.ಎಚ್. ಪ್ರಮೋದ್ ಎಂಬುವರ ಬ್ಯಾಂಕ್ ಖಾತೆಯಿಂದ 52,60,523 ರೂಪಾಯಿಗಳನ್ನು ನೆಟ್‌ಬ್ಯಾಂಕಿಂಗ್ ವರ್ಗಾವಣೆಯಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ದಾವಣಗೆರೆಯ ಸಿಇಎನ್ ಪೊಲೀಸರು ಆರೋಪಿ ಸೈಯದ್ ಅರ್ಫಾತ್‌ನನ್ನು ಬಂಧಿಸಿ, ಹಣ, ಮೊಬಲ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಖಾತೆಯಲ್ಲಿತ್ತು 150 ಕೋಟಿ ಆನ್‌ಲೈನ್ ವಂಚನೆಯ ಹಣ
ಆರೋಪಿತರ ಚಾಲ್ತಿ ಖಾತೆಯಲ್ಲಿ ಜು. 27 ರಿಂದ ಆ. 19 ರವರೆಗೆ ಸುಮಾರು 150 ಕೋಟಿ ಆನ್‌ಲೈನ್ ವಂಚನೆಯ ಹಣ ಇರುವುದು, ಅದರಲ್ಲಿ 132 ಕೋಟಿ ರೂಪಾಯಿ ವಿತ್ ಡ್ರಾ ಮಾಡಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಖಾತೆಯಲ್ಲಿದ್ದ 18 ಕೋಟಿ ರೂಪಾಯಿಯನ್ನ ಪೊಲೀಸರು ಪ್ರೀಜ್ ಮಾಡಿಸಿದ್ದಾರೆ. ದಾವಣಗೆರೆಯ 3ನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಆದೇಶದಂತೆ ಪ್ರಮೋದ್ ಅವರಿಗೆ 52,60,400ರೂಪಾಯಿ ಹಿಂದಿರುಗಿಸಲಾಗಿದೆ.
ಆರೋಪಿಗೆ ಅಂತರರಾಜ್ಯ ಲಿಂಕ್
ಆರೋಪಿಗಳು ಉತ್ತರ ಪ್ರದೇಶದ ಗಾಜೀಯಬಾದ್, ಶ್ರೀನಗರ, ಆಂಧ್ರ ಪ್ರದೇಶದ ಏಲೂರು, ಮುಂಬಯಿ, ಬೆಂಗಳೂರು ಸಿಟಿ ಹಾಗೂ ದಾವಣಗೆರೆ ಜಿಲ್ಲೆಯ ಸಿಇಎನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಭಾಗಿಯಾಗಿ ರುವುದು ತಿಳಿದುಬಂದಿರುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಸೈಬರ್ ವಂಚನೆ ಪ್ರರಕಣ ನಡೆಸಿ ದ್ದಾನೆ. ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯ ಸೈಬರ್ ಪೊಲೀಸ್ ಕಾರ್ಯಾಚರಣೆ ತಂಡದಿಂದ ಬಂಽಯಾಗಿದ್ದಾನೆ.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಽಕ್ಷಕ ಪರಮೇಶ್ವರ್ ಹೆಗಡೆ ಸೈಬರ್ ಪೊಲೀಸ್ ಠಾಣೆಯ ಡಿವೈಎಸ್ಪಿ ಬಂಕಾಳಿ ನಾಗಪ್ಪ,ನಿರೀಕ್ಷಕ ವಸಂತ್,ಸಿಬ್ಬಂದಿಗಳಾದ ಅಶೋಕ, ಸುರೇಶ್, ಮುತ್ತುರಾಜ್, ನಿಜ ಲಿಂಗಪ್ಪ, ಅಂಜಿನಪ್ಪ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.