ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಅಂತರ ಜಿಲ್ಲಾ ಬೈಕ್ ಕಳ್ಳತನ ಆರೋಪಿಗಳನ್ನು ಬಂಧಿದ್ದಾರೆ. ಆರೋಪಿಗಳಿಂದ 14 ಬೈಕ್, 1 ಒಮ್ನಿ ಹಾಗೂ ನಗದು ಸಹಿತ 10.08 ಲಕ್ಷ ಸ್ವತ್ತು ವಶ ಪಡಿಸಿಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿಯ 9 ಪ್ರಕರಣ , ದಾವಣಗೆರೆ ಕೆಟಿಜೆ ನಗರದ 4 ಪ್ರಕರಣ, ಹೊನ್ನಾಳಿ ಠಾಣೆಯ 02, ದಾವಣಗೆರೆ ನಗರ ಠಾಣೆಯ 1 ಪ್ರಕರಣ ಹಾಗೂ ಶಿವಮೊಗ್ಗದ ಶಿರಳಾಕೊಪ್ಪದ 01 ಪ್ರಕರಣ ಸೇರಿ ಒಟ್ಟು 18 ಪ್ರಕರಣವನ್ನು ಮಲೇಬೆನ್ನೂರು ಪೊಲೀಸರು ಭೇದಿಸಿದ್ದಾರೆ. ಬಂಧಿತರಿಂದ ಒಟ್ಟು 10.08 ಲಕ್ಷ ಬೆಲೆಯ 14 ಬೈಕ್, ಒಂದು ಒಮ್ನಿ ಹಾಗೂ 66,500 ನಗದು ವಶಕ್ಕೆ ಪಡೆದಿದ್ದಾರೆ.
ಎಸ್ ಪಿ ರಿಷ್ಯಂತ್ ಅವರ ಮಾರ್ಗದರ್ಶನ , ದಾವಣಗೆರೆ ನಗರ ಉಪವಿಭಾಗದ ಡಿವೈಎಸ್ ಪಿ ಬಿ.ಎಸ್. ಬಸವರಾಜ್ ಅವರ ನೇತೃತ್ವದಲ್ಲಿ ಹರಹರ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು ಹಾಗೂ ಪಿಎಸ್ ಐ ಗಳಾದ ರವಿಕುಮಾರ್ , ಶಂಕರ್ ಗೌಡ ಪಾಟೀಲ್ ಮತ್ತು ಮಲೇಬೆನ್ನೂ ಠಾಣೆಯ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.