ದಾವಣಗೆರೆ: ಮದುವೆಯಾಗಿ ಎರಡೇ ತಿಂಗಳಲ್ಲಿ ಪ್ರೀತಿಸಿದ ಹುಡುಗನ ಜೊತೆ ನವ ವಿವಾಹಿತೆ ಪರಾರಿಯಾಗಿದ್ದಾಳೆ. ಇದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದು ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿಕೊಟ್ಟಿದ್ದ ಯುವತಿ ಸೋದರ ಮಾವ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮೂಲಕ ಒಂದು ಮದುವೆ ಮುರಿದು ಬಿದ್ದಿದ್ದಕ್ಕೆ ಎರಡು ಜೀವ ಬಲಿ ಪಡೆದಂತಾಗಿದೆ.
ದಾವಣಗೆರೆ: ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ
ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
ಈ ಘಟನೆ ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದಲ್ಲಿ ನಡೆದಿದೆ. ಮದುವೆಯಾದ ಎರಡೇ ತಿಂಗಳಿಗೆ ನವ ವಿವಾಹಿತ ಹರೀಶ್ (32) ಆತ್ಮಹತ್ಯೆಗೆ ಶರಣಾಗಿದ್ದಾನೆ. ಎರಡುವರೆ ತಿಂಗಳಲ್ಲಿ ಹೆಂಡತಿ ಪರ ಪುರುಷನೊಂದಿಗೆ ಓಡಿ ಹೋಗಿದ್ದು, ಹರೀಶ್ ಮೇಲೆಯೇ ಇಲ್ಲ- ಸಲ್ಲದ ಆರೋಪ ಮಾಡಿದ್ದರು. ಇದತಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ದಾವಣಗೆರೆ: ಈ ಬಾರಿಯ ಬಜೆಟ್ ನಲ್ಲಿ ಜಿಲ್ಲೆಯ ನೀರಾವರಿಗೆ ಹೆಚ್ಚಿನ ಅನುದಾನ ತರುತ್ತೇವೆ; ಜಿಲ್ಲಾ ಉಸ್ತುವಾರಿ ಸಚಿವ
ಡೆತ್ ನೋಟ್ ಪತ್ತೆ
ಹರೀಶ್ ನೇಣಿಗೆ ಶರಣಾಗುವ ಮುನ್ನವೇ ಡೆತ್ ನೋಟ್ ಸಹ ಬರೆದಿಟ್ಟಿದ್ದಾನೆ. ತನ್ನ ಸಾವಿಗೆ ಹೆಂಡತಿ, ಅತ್ತೆ ಮಾವ ಹಾಗೂ ಹೆಂಡತಿಯನ್ನ ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಬರೆದಿಟ್ಟು ಹರೀಶ್ ನೇಣಿಗೆ ಕೊರಳೊಡ್ಡಿದ್ದಾನೆ.ಮಗನ ಸಾವಿಗೆ ಆತನ ಹೆಂಡ್ತಿಯೇ ಕಾರಣ ಎಂದು ಹರೀಶ್ ಕುಟುಂಬಸ್ಥರು ಕಆರೋಪ ಮಾಡಿದ್ದಾರೆ.
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಕೊಟ್ಟ ಮಾತು ಉಲ್ಲೇಖ; ಈ ಬಾರಿ ಅಲ್ಪಸಂಖ್ಯಾತರಿಗೇ ಟಿಕೆಟ್ ಎಂದ ಸಚಿವ ಜಮೀರ್
ಇತ್ತ ತನ್ನ ಅಂತ್ಯ ಸಂಸ್ಕಾರವನ್ನ ಬಸವ ಧರ್ಮ ಪ್ರಕಾರವಾಗಿ ನೆರವೇರಿಸುವಂತೆಯೂ ಹರೀಶ್ ತನ್ನ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕ್ತಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಮಾಡಿದ ಸೋದರ ಮಾವ ಸಹ ಆತ್ಮಹತ್ಯೆ
ಹರೀಶ್‌ಗೆ ಮದುವೆ ಮಾಡಿಸಿದ್ದ ಯುವತಿಯ ಸೋದರ ಮಾವ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಹರೀಶ್ ಪತ್ನಿ ಸರಸ್ವತಿ ಅವರ ಸೋದರಮಾವ ರುದ್ರೇಶ್(40) ಇಬ್ಬರಿಗೂ ಮುಂದೆ ನಿಂತು ಮದುವೆ ಮಾಡಿದ್ದನು.ಹರೀಶ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ತಾನು ಕೂಡ ವಿಷ ಸೇವಿಸಿ ರುದ್ರೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ದಾವಣಗೆರೆಯ ಡಾ.ಸುರೇಶ್ ಹನಗವಾಡಿಗೆ ಪ್ರತಿಷ್ಠಿತ ‘ಪದ್ಮಶ್ರೀ’
ಆನೆಕೊಂಡದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರುದ್ರೇಶ್ ಅವರನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ರುದ್ರೇಶ್ ಸಹಬಸಾವನ್ನಪ್ಪಿದ್ದಾರೆ.ಹರೀಶ್ ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡುತ್ತಿದ್ದು. ರುದ್ರೇಶ್ ಹರೀಶ್ ಹಾಗೂ ಸರಸ್ವತಿಗೆ ಮದುವೆ ಮಾಡಿಸಿದ್ದರು. ಈಬಗ್ಗೆ ದಾವಣಗೆರೆಯ ಆರ್ ಎಂಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



