ದಾವಣಗೆರೆ: ಡ್ರಗ್ಸ್ ಕೇಸ್ ನಲ್ಲಿ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮತ್ತೊಬ್ಬ ಕಾಂಗ್ರೆಸ್ ಮುಖಂಡನನ್ನು ಇಂದು (ಡಿ.29) ಅರೆಸ್ಟ್ ಮಾಡಿದ್ದಾರೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಅನ್ವರ್ ಬಾಷಾನನ್ನು ಬಂಧಿಸಿದ್ದಾರೆ. ಡ್ರಗ್ಸ್ ಕೇಸ್ ನಲ್ಲಿ ಎಸ್ಪಿ ಉಮಾ ಪ್ರಶಾಂತ್ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ದಾವಣಗೆರೆ: ಮತ್ತೆ ಅಡಿಕೆಗೆ ಭರ್ಜರಿ ಬೆಲೆ; ಕೇವಲ 10 ದಿನದಲ್ಲಿ 3 ಸಾವಿರ ಏರಿಕೆ
ಡಿ.23ರಂದು ಡ್ರಗ್ಸ್ ದಂಧೆ ನಡೆಸುತ್ತಿದ್ದ ಗ್ಯಾಂಗ್ ಮೇಲೆ ಜಿಲ್ಲಾ ಪೊಲೀಸರ ದಾಳಿ ಮಾಡಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡ, ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಆಪ್ತ ವೇದಮೂರ್ತಿ ಸೇರಿ ನಾಲ್ವರ ಬಂಧನವಾಗಿತ್ತು. ಇದೀಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಅನ್ವರ್ ಬಾಷಾ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಆ ಮೂಲಕ ಡ್ರಗ್ಸ್ ಕೇಸ್‌ನಲ್ಲಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 8 ಆರೋಪಿಗಳ ಬಂಧನ ಮಾಡಲಾಗಿದೆ.
ದಾವಣಗೆರೆ: ಮಹಿಳೆ ಸರ ಸುಲಿಗೆ ಮಾಡಿದ ಇಬ್ಬರು ಆರೋಪಿಗಳ ಬಂಧನ; 1.80 ಲಕ್ಷ ಮೌಲ್ಯದ ಮಾಂಗಲ್ಯ ಸರ ವಶ
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಅನ್ವರ್ ಬಾಷಾ ಬಂಧನ ಮಾಡಿದ್ದು, ಜೊತೆಗೆ ಪಾರಸ್, ಕೃಷ್ಣಮೂರ್ತಿ, ಧೋನಿ ಅಲಿಯಾಸ್ ಮಂಜುನಾಥ್ ಎಂಬವರನ್ನು ಕೂಡ ಬಂಧಿಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಸಚಿವರ ಆಪ್ತರಿಂದಲೇ ಡ್ರಗ್ಸ್ ದಂಧೆ ನಡೆಯುತ್ತಿದ್ದು ಸರ್ಕಾರಕ್ಕೆ ಮುಜುಗರ ತರುವಂತಾಗಿದೆ. ಪೊಲೀಸರು ಸಹ ನಿರ್ಭೀತಿಯಿಂದ ಡ್ರಗ್ಸ್ ಕಿಂಗ್ ಪಿನ್‌ಗಳ ಹೆಡೆಮುರಿ ಕಟ್ಟಿದ್ದಾರೆ.



