ದಾವಣಗೆರೆ: ನಕಲಿ ಬಂಗಾರ ನೀಡಿ ವಂಚಿಸಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು ಆರೋಪಿಗಳಿಂದ ರೂ. 5 ಲಕ್ಷದ 90 ಸಾವಿರ ನಗದು ಹಣ, ಒಂದು ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಅವಧಿ ಮುಗಿದು ಐದು ವರ್ಷಗಳ ನಂತರ ಜಿ.ಪಂ, ತಾ.ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ; ಯಾವಾಗ ಚುನಾವಣೆ..?
ಮಂಡ್ಯದ ಮಳವಳ್ಳಿ ತಾಲ್ಲೂಕಿನ ಕುಂದೂರು ವೆಂಕಟೇಶಪ್ಪ (35) ನಕಲಿ ಬಂಗಾರ ಪಡೆದು ವಂಚನೆಗೆ ಒಳಗಾದವರಾಗಿದ್ದು, ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಮಳವಳ್ಳಿ ಟೌನ್ನಿಂದ ಗ್ರಾಮಕ್ಕೆ ಆಟೋ ಓಡಿಸಿಕೊಂಡಿದ್ದನು. ಮೂರು ವರ್ಷದ ಹಿಂದೆ ಮಂಜುನಾಥ @ ಮಂಜು, ಶಿವಮೊಗ್ಗ ಎಂಬ ವ್ಯಕ್ತಿ ಮಳವಳ್ಳಿಯಲ್ಲಿ ಪರಿಚಯವಾಗಿದ್ದು, ನಂತರ ದಿನಗಳಲ್ಲಿ ಮೊಬೈಲ್ ನಂಬರ್ ಪಡೆದಿದ್ದ ಮಂಜುನಾಥನು ಕರೆ ಮಾಡಿ ನಮ್ಮ ಅಜ್ಜಪ್ಪನ ಮನೆಯ ಪೌಂಡೇಷನ್ ತಗೆಯುವಾಗ ನಾಲ್ಕು ಕೆ.ಜಿ ಯಷ್ಟು ಬಂಗಾರ ಸಿಕ್ಕಿರುತ್ತದೆ. ಅಂತಾ ಪದೇ ಪದೇ ಪೋನ್ ಮಾಡಿ ಒಂದು ಕಾಲು ಕೆ.ಜಿ ಬಂಗಾರವನ್ನು ಇಂದಿನ ಮಾರ್ಕಟ್ ರೇಟಿಗಿಂತ ಅರ್ಧ ರೇಟಿಗೆ ಕೊಡುತ್ತೇನೆ ಅಂತ ತಿಳಿಸಿದನು.
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಆಗ ನಾನು ನನ್ನ ಬಳಿ ಅಷ್ಟೊಂದು ಹಣ ಇಲ್ಲ, ಅಂತ ಹೇಳಿದ್ದು. ಅದಕ್ಕೆ ಅವನು ನೀನು 10 ಲಕ್ಷ ರೂ ಹಣವನ್ನು ಜೋಡಿಸಿಕೊಂಡು ಬಾ ಮೊದಲು ನಾನು ನಿನಗೆ ಒಂದು ಬಂಗಾರದ ಬಿಲ್ಲೆಯನ್ನು ಕೊಡುತ್ತೇನೆ. ಅದನ್ನು ಪರೀಕ್ಷಿಸಿಕೊಂಡು ನಂತರ ನಿನಗೆ ನಂಬಿಕೆ ಬಂದರೆ 1/4 ಕೆ.ಜಿ ಬಂಗಾರವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದನು, ನಂಬಿ ನಾನು ನನ್ನ ಸ್ನೇಹಿತರ ಬಳಿ ಹಾಗು ಇತರೆ ಕಡೆ ಸೇರಿ ಒಟ್ಟ 07 ಲಕ್ಷ ರೂಗಳನ್ನು ಜೋಡಿಸಿಕೊಂಡೆನು, ದಿನಾಂಕ: 21/11/2025 ರಂದು ಹೊನ್ನಾಳಿ ಮಠದ ಸರ್ಕಲ್ ಬಳಿ ಇರುವ ಆರ್ಚ ಬಳಿ ಕರೆದುಕೊಂಡು ಹೋಗಿ ನನಗೆ ಒಂದು ಬಿಲ್ಲೆ ಕೊಟ್ಟನು.
ಇದನ್ನು ನೀನು ಎಲ್ಲಾದರು ಪರೀಕ್ಷಿಸಿಕೊಂಡು ಬಾ ಬಂಗಾರದ ಬಿಲ್ಲೆ ಆಗಿದ್ದರೆ ನೀನು ತಂದಿರುವ ಹಣವನ್ನು ಕೊಟ್ಟು 1/4 ಕೆ.ಜಿ ಬಂಗಾರವನ್ನು ತಗೆದುಕೊಂಡು ಹೋಗುವಂತೆ ಅಂತ ತಿಳಿಸಿದನು, ನಾನು ಸದರಿ ಬಿಲ್ಲೆಯನ್ನು ಹೊನ್ನಾಳಿ ಟೌನಿನಲ್ಲಿರುವ ಒಂದು ಬಂಗಾರದ ಅಂಗಡಿಗೆ ಹೋಗಿ ಪರೀಕ್ಷಿಸಿದಾಗ ಅದು ಬಂಗಾರದ ಬಿಲ್ಲೆ ಅಂತ ತಿಳಿಸಿದರು, ನನಗೆ ಒಂದು ಬಟ್ಟೆಕಟ್ಟಿದ ಗಂಟನ್ನು ಕೊಟ್ಟು ಇದರಲ್ಲಿ ಬಂಗಾರದ ಬಿಲ್ಲೆಗಳು ಇವೆ ಅಂತ ಹೇಳಿ, ನನ್ನಿಂದ ಇಬ್ಬರು ಸೇರಿ 06 ಲಕ್ಷ ಹಣವನ್ನು ಹಾಗು ನನ್ನ ಮೊಬೈಲ್ ಫೋನನ್ನು ಪಡೆದುಕೊಂಡು ಇಲ್ಲಿ ನಿಲ್ಲಬೇಡ ಯಾರಾದರು ಬರುತ್ತಾರೆ ಬೇಗ ಹೋಗು ಅಂತ ಹೇಳಿ ಗಾಭರಿಪಡಿಸಿ ಇಬ್ಬರು ಯಾವುದೋ ಒಂದು ಬೈಕ್ನಲ್ಲಿ ಹತ್ತಿಕೊಂಡು ಹೋದರು.
ನಾನು ಗಾಬರಿಗೊಂಡು ನನ್ನ ತಮ್ಮ ಹಾಗೂ ನನ್ನ ಸ್ನೇಹಿತನ ಬಳಿ ಬಂದು ಅವರು ಕೊಟ್ಟು ಹೋಗಿದ್ದ ಗಂಟನ್ನು ಬಿಚ್ಚಿದೆವು, ಅದರಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ ವೃತ್ತಕಾರದ ಸುಮಾರು 150 ಗ್ರಾಂನಷ್ಟಿ ಬಿಲ್ಲೆಗಳಿದ್ದವು, ಅವುಗಳನ್ನು ನಾವು ಹೊನ್ನಾಳಿಯಲ್ಲಿರುವ ಬಂಗಾರದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅವುಗಳು ನಕಲಿ ಬಂಗಾರದ ಬಿಲ್ಲೆಗಳು ಅಂತ ತಿಳಿಸಿದರು. ಆದ್ದರಿಂದ ನನ್ನನ್ನ ನಂಬಿಸಿ ನನ್ನಿಂದ 06 ಲಕ್ಷ ರೂಗಳನ್ನು ಹಾಗು ನನ್ನ ಮೊಬೈಲ್‌ನ್ನು ಪಡೆದುಕೊಂಡು ನನಗೆ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಮೋಸ ಮಾಡಿದ ಇನ್ನೂಬ್ಬ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು ದಾಖಲಿಸಿದ್ದರು.
ಈ ಬಗ್ಗೆ ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಎ ಹೆಗಡೆ, ಡಿವೈಎಸ್ಪಿ ಸ್ಯಾಮ್ ವರ್ಗೀಸ್, ಮಾರ್ಗದರ್ಶನದಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಹೆಚ್ ನೇತೃತ್ವದಲ್ಲಿ ಆರೋಪಿತರ ಪತ್ತೆಗಾಗಿ ತಂಡ ರಚಿಸಲಾಗಿತ್ತು. ತನಿಖೆ ಕೈಗೊಂಡು ದಿನಾಂಕ: 13-12-2025 ರಂದು ಆರೋಪಿತರಾದ 1) ಪರಶುರಾಮ (43) ಹಾಡೋನಹಳ್ಳಿ ಗ್ರಾಮ ಶಿವಮೊಗ್ಗ ತಾಲ್ಲೂಕು, 2)ಮನೋಜ್ @ ಮನು (28) ದಾನಿಹಳ್ಳಿ ಗ್ರಾಮ, ನ್ಯಾಮತಿ ತಾಲ್ಲೂಕು. ಇವರನ್ನು ಪತ್ತೆ ಮಾಡಿ ಇವರಿಂದ ರೂ. 5 ಲಕ್ಷದ 90 ಸಾವಿರ ನಗದು ಹಣ,ಒಂದು ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿತರ ಹಿನ್ನೆಲೆ: ಆರೋಪಿತ ಪರಶುರಾಮ ಈತನ ಮೇಲೆ ಈ ಹಿಂದೆ ಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಬಿಡುಗಡೆಹೊಂದಿರುತ್ತಾನೆ. ನಂತರ ದಾವಣಗೆರೆ ಹೊನ್ನಾಳಿ ಠಾಣೆಯಲ್ಲಿ ಪ್ರರಕಣದಲ್ಲಿ ಭಾಗಿಯಾಗಿರುತ್ತಾನೆ. ಪ್ರಕರಣಗಳನ್ನು ಭೇದಿಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



