ದಾವಣಗೆರೆ: ದಾವಣಗೆರೆ ಹೊರ ವಲಯದ ಕುಂದುವಾಡ ಕೆರೆಯಲ್ಲಿ ಯುವಕರಿಬ್ಬರ ಮೃತದೇಹಗಳು ಪತ್ತೆಯಾಗಿವೆ. ಈ ಯುವಕರು ಮೀನಿನ ಬಲೆಗೆ ಸಿಲುಕಿ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ನಗರದ ಶಾಂತಿನಗರದಮನು (19) ಹಾಗೂ ಚೇತನ್ (22) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ದಾವಣಗೆರೆ-ಮಂತ್ರಾಲಯ ಎಸಿ ವೋಲ್ವೊ ಬಸ್ ಸೌಲಭ್ಯಕ್ಕೆ ಸಂಸದೆ ಚಾಲನೆ; ಸಮಯ, ಮಾರ್ಗ, ದರ ಪಟ್ಟಿ ಮಾಹಿತಿ ಇಲ್ಲಿದೆ..
ಸ್ನೇಹಿತರಾಗಿದ್ದ ಮನು, ಚೇತನ್ ಮನೆಯಿಂದ ನಾಪತ್ತೆಯಾಗಿದ್ದರು. ಅವರ ಪೋಷಕರು ಹುಡುಕಾಟ ನಡೆಸಿದ್ದರು. ಕುಂದುವಾಡ ಕೆರೆಯ ದಡದ ಬಳಿ ಯುವಕರ ಬಟ್ಟೆ, ಮೊಬೈಲ್ ಹಾಗೂ ಬೈಕ್ ಪತ್ತೆಯಾಗಿದ್ದವು. ಆಗ ಮುಳುಗುತಜ್ಞರ ಸಹಾಯದಿಂದ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಮಂಗಳವಾರ ಮೃತದೇಹಗಳು ಪತ್ತೆಯಾಗಿವೆ.
ಯುವಕರು ಕೆರೆಯಲ್ಲಿ ರಾತ್ರಿ ವೇಳೆ ಮೀನು ಹಿಡಿಯಲು ಹೋದಾಗ ಮೀನಿನ ಬಲೆಗೆ ಸಿಲುಕಿ ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ ದ್ದಾರೆ. ಟೆಂಡರ್ ಪಡೆದವರು ನಿತ್ಯವೂ
ರಾತ್ರಿ ಬಲೆ ಹಾಕಿ, ಬೆಳಿಗ್ಗೆ ತೆಪ್ಪಗಳ ಸಹಾಯದಿಂದ ಮೀನುಗಳನ್ನು ಬಿಡಿಸಿಕೊಳ್ಳುತ್ತಾರೆ. ಆದರೆ, ಮೀನು ಹಿಡಿಯುವ ಆಸೆಯಿಂದ ಯುವಕರು ರಾತ್ರಿ ವೇಳೆ ಮೀನು ಹಿಡಿಯಲು ಕೆರೆಗೆ ಇಳಿದಿದ್ದಾರೆ.ಮೀನಿಗೆ ಹಾಕಿದ್ದ ಬಲೆಗೆ ಸಿಲುಕಿದ್ದು, ಬಲೆಯಿಂದ ಬಿಡಿಸಿಕೊಳ್ಳಲಾಗದೇ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



