ದಾವಣಗೆರೆ: ಅಕ್ರಮ ಪಡಿತರ ಸಾಗಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯಿಂದ 1,13,100/-ರೂ ಮೌಲ್ಯದ ಒಟ್ಟು 76 ಪ್ಲಾಸ್ಟಿಕ್ ಚೀಲದ ತುಂಬಿದ್ದ ಒಟ್ಟು 3770 ಕೆಜಿ ಪಡಿತರ ರಾಗಿಯನ್ನು ಹಾಗೂ ಸದರಿ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನ. 02ರಂದು ದಾವಣಗೆರೆ ಪಿಜಿ ಬಡಾವಣೆ 8ನೇ ಮುಖ್ಯ ರಸ್ತೆಯ, ಮೋತಿ ವೀರಪ್ಪ ಕಾಲೇಜ್ ಪಕ್ಕದ ರಸ್ತೆಯಲ್ಲಿ ಗೂಡ್ಸ್ ವಾಹನದಲ್ಲಿ ಪಡಿತರ ವ್ಯವಸ್ಥೆಯ ರಾಗಿಯನ್ನು ಅಕ್ರಮವಾಗಿ ವಾಹನದಲ್ಲಿ ಸಂಗ್ರಹ ಮಾಡಿಕೊಂಡು ಎಲ್ಲಿಗೋ ಸಾಗಿಲು ವಾಹವನ್ನು ನಿಲ್ಲಿಸಿಕೊಂಡಿದ್ದಾರೆ ಅಂತ ಬಾತ್ಮೀದಾರರು ಮಾಹಿತಿ ಮಾಹಿತಿ ಬಂದಿತ್ತು.
ಪಿ ಎಸ್ ಐ ಸಾಗರ್ ಅತ್ತರ್ ವಾಲಾ ಹಾಗೂ ಸಿಬ್ಬಂದಿಗಳು ಮತ್ತು ಬಡಾವಣೆ ಪೊಲೀಸ್ ಠಾಣೆಯ ಪಿ ಎಸ್ ಐ ಅನ್ನಪೂರ್ಣಮ್ಮ ಹಾಗೂ ಸಿಬ್ಬಂದಿಗಳ ತಂಡ ಆಹಾರ ನಿರೀಕ್ಷಕ ಮಂಜುನಾಥ್ ಟಿ ಗೂಡ್ಸ್ ವಾಹನ ಬಳಿ ಹೋಗಿ ಚೆಕ್ ಮಾಡಿದಾಗ ಸದರಿ ವಾಹನದಲ್ಲಿ ಸುಮಾರು ರಾಗಿ ಮೂಟೆಗಳು ಇರುವುದು ಖಚಿತವಾಗಿದೆ.
ಮಲೆಬೆನ್ನೂರು ಸುತ್ತ-ಮುತ್ತ ಗ್ರಾಮದಲ್ಲಿ ಜನಗಳಿಂದ ಪಡಿತರ ರಾಗಿ ಸಂಗ್ರಹ
ನಂತರ ವಾಹನದಲ್ಲಿದ್ದ ವ್ಯಕ್ತಿಯನ್ನು ವಿಚಾರ ಮಾಡಿದಾಗ ಸೈಯದ್ ಇರ್ಷಾದ್ ಅಲಿ ಮಲೇಬೆನ್ನೂರು ನಿವಾಸಿ ಎಂದು ತಿಳಿಸಿದ್ದು, ರಾಗಿಯ ಬಗ್ಗೆ ವಿಚಾರ ಮಾಡಿ ಬಿಲ್ ಕೊಡುವಂತೆ ಕೇಳಿದಾಗ ತನ್ನ ಹತ್ತಿರ ಯಾವುದೇ ಬಿಲ್ ಇರುವುದಿಲ್ಲ ಮಲೆಬೆನ್ನೂರು ಮತ್ತು ಸುತ್ತ-ಮುತ್ತ ಗ್ರಾಮದಲ್ಲಿ ಜನಗಳಿಂದ ಪಡಿತರ ವ್ಯವಸ್ಥೆಯ ರಾಗಿಯನ್ನು ಕಡಿಮೆ ಬೆಲೆ ಖರೀದಿ ಮಾಡಿಕೊಂಡು, ಎ.ಪಿ.ಎಂ.ಸಿ ಮಾರಾಟ ಮಾಡಲು ಹೋಗುತ್ತಿದ್ದೇನು ತಿಳಿಸಿರುತ್ತದೆ. ಕಾನೂನು ಬಾಹಿರವಾಗಿ ಅನ್ನ ಭಾಗ್ಯ ಯೋಜನೆಯ ಪಡಿತರ ವ್ಯವಸ್ಥೆಯ ರಾಗಿಯನ್ನು ಅನಧೀಕೃತವಾಗಿ ಸಂಗ್ರಹ ಮಾಡಿರುವುದು ಖಚಿತವಾಗಿರುತ್ತದೆ.
ಏನೆಲ್ಲಾ ವಶಕ್ಕೆ ಪಡೆಯಲಾಯಿತು..?
ರಾಗಿ ತುಂಬಿಕೊಂಡು ಬಂದಿದ್ದ ಕೆಎ-68, 4827 ನೇ ಇಂಟ್ರಾ ವಿ-30 ನೇ ಗೂಡ್ಸ್ ವಾಹನದಲ್ಲಿದ್ದ ಅಂದಾಜು ರಾಗಿ ಬೆಲೆ 1,13,100/-ರೂ ಮೌಲ್ಯದ ಒಟ್ಟು 76 ಪ್ಲಾಸ್ಟಿಕ್ ಚೀಲದ ತುಂಬಿದ್ದ ಒಟ್ಟು 3770 ಕೆಜಿ ಪಡಿತರ ರಾಗಿಯನ್ನು ಹಾಗೂ ಸದರಿ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಪಿ ಎಸ್ ಐ ಸಾಗರ್ ಅತ್ತರ್ ವಾಲಾ, ಅನ್ನಪೂರ್ಣಮ್ಮ ಸಿಬ್ಬಂದಿಗಳಾದ ಗೋವಿಂದರಾಜ್, ಶಿವರಾಜ್, ಮಂಜುನಾಥ, ಷಣ್ಮುಖ, ಪ್ರಕಾಶ, ಅಂಜಿನಪ್ಪ, ಅಜ್ಜಯ್ಯ. ನಾಗಪ್ಪ ಹೊಸಮನಿ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



