ದಾವಣಗೆರೆ: ಜಿಲ್ಲೆಯ ಚನ್ನಗಿರಿಯ ಲಷ್ಕರ್ ಮೊಹಲ್ಲಾದ ಮನೆಯೊಂದರ ಬೀಗ ಮುರಿದು 10 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಪ್ರಕರಣದ ಆರೋಪಿಗಾಲನ್ನು ಪೊಲೀಸರು ಬಂಧಿಸಿದ್ದಾರೆ. 10 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ 20,000 ನಗದು ವಶಪಡಿಸಿಕೊಳ್ಳಲಾಗಿದೆ.
ಚನ್ನಗಿರಿಯಲಷ್ಕರ್ ಮೊಹಲ್ಲಾದಮೊಹಮ್ಮದ್ ಸಾಧಿಕ್ (37) ಬಂಧಿತ ಆರೋಪಿಯಾಗಿದ್ದಾನೆ. ಮೆಕ್ಯಾನಿಕ್ ಮೊಹಮ್ಮದ್ ಅಲೀಂವುಲ್ಲಾ ಎಂಬುವರ ಮನೆಯಲ್ಲಿ ಜುಲೈ7ರಂದು ಕಳವು ನಡೆದಿತ್ತು. ಮನೆಯ ಬೀಗ ಮುರಿದು ಬೀರವಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.



