ದಾವಣಗೆರೆ; ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಆಯತಪ್ಪಿ ಬಿದ್ದು ಯುವಕ ಸ್ಥಳದಲ್ಲಿಯೇ ಮೃ*ತಪಟ್ಟ ಘಟನೆ ನಡೆದಿದೆ.
ಗಗನ್ (19) ಮೃ*ತಪಟ್ಟ ಯುವಕ. ಸಿಮೆಂಟ್ ಇಟ್ಟಿಗೆಯನ್ನು ತುಂಬಿಕೊಂಡು ಹೋಗುತ್ತಿದ್ದ ಸ್ನೇಹಿತ ಅಕ್ಷಯ್ ಜೊತೆ ಟ್ರ್ಯಾಕ್ಟರ್ ಹತ್ತಿದ್ದ ಗಗನ್, ಎಂಜಿನ್ ಮತ್ತು ಟ್ರೈಲರ್ ನಡುವೆ ಇರುವ
ಹುಕ್ ಮೇಲೆ ನಿಂತಿದ್ದನು. ಆಗ ಆಯತಪ್ಪಿ
ಬಿದ್ದಿದ್ದುದ್ದು, ಅವನ ತಲೆಯ ಮೇಲೆ ಅದೇ ಟ್ರ್ಯಾಕ್ಟರ್ ಟ್ರೈಲರ್‌ನ ಬಲಬದಿಯ ಗಾಲಿ ಹತ್ತಿದೆ. ಇದರ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನ್ಯಾಮತಿಪೊಲೀಸ್ ಠಾಣೆಯಲ್ಲಿ ಗಗನ್ ಸಂಬಂಧಿಗಳು ದೂರು ದಾಖಲಿಸಿದ್ದಾರೆ.



