ದಾವಣಗೆರೆ: ಮನೆ ಬೀಗ ಮುರಿದು ಕಳ್ಳತನ ಮಾಡಿದ ಆರೋಪಿಗಳನ್ನು ಕೆಟಿಜೆ ನಗರ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ವಶಕ್ಕೆಪಡೆಯಲಾಗಿದೆ.
ನಗರದ ಕಿರ್ವಾಡಿ ಲೇ ಔಟ್ ವ್ಯಾಪಾರಿ ಗಿರೀಶ್ ಹೆಚ್.ಎ(56) ದಿನಾಂಕ;14-07-2025 ರಂದು ತಮ್ಮ ಮನೆಗೆ ಇಂಟರ್ ಲಾಕ್ ಹಾಕಿಕೊಂಡು ಬೆಂಗಳೂರಿಗೆ ಹೋದಾಗ ಅದೇ ದಿನ ರಾತ್ರಿ ಯಾರೋ ಕಳ್ಳರು ಪಮನೆಯ ಇಂಟರ್ ಲಾಕ್ ಗಳನ್ನು ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯ ರೂಮ್ ನಲ್ಲಿದ್ದ ಗಾಡ್ರೇಜ್ ಬೀರು ಮತ್ತು ತಿಜೋರಿಲ್ಲಿದ್ದ ಸುಮಾರು 18 ಕೆ.ಜಿ.790 ಗ್ರಾಂ ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳ್ಳರನ್ನು ಪತ್ತೆ ಮಾಡಿ, ಬೆಳ್ಳಿ ಸಾಮಾನುಗಳನ್ನು ಪತ್ತೆ ಮಾಡಿಕೊಡುವಂತೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಆರೋಪಿ ಹಾಗೂ ಮಾಲು ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್ ಎಎಸ್ಪಿ ಪರಮೇಶ್ವರ ಹೆಗಡೆ, ಮಂಜುನಾಥ್. ಜಿ. ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ.ಬಿ.ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಂಡ ತಂಡ ಆರೋಪಿಗಳಾದ ಎ1 ದಿನೇಶ್ ಕುಮಾರ್ (35) ಚಾಲಕ ವೃತ್ತಿ, ಖಾಯಂ ವಿಳಾಸ- ಜೈತ್ರಾನ್ ನಗರ ಪಾಲಿ ಜಿಲ್ಲೆ, ಹಾಲಿ ವಾಸ-ಜೋದ್ ಪುರ ರಸ್ತೆ, ಚಾನಲ್ ಹತ್ತಿರ ಬರ್ ಗ್ರಾಮ, ರಾಯಪುರ (ತಾ), ಬ್ಯಾವರ್ ಜಿಲ್ಲೆ, ರಾಜಸ್ಥಾನ ರಾಜ್ಯ. ಎ2 ದೀಪಕ್ ಕುಮಾರ್, 26 ವರ್ಷ, ಹಮಾಲಿ ಕೆಲಸ, ವಾಸ- ಸುಂದರ್ ನಗರ, ಕೋಟಾ ನಗರ, ರಾಜಸ್ಥಾನ ರಾಜ್ಯ. ಎ3 ರಮೇಶ್ ಕುಮಾರ್, 31 ವರ್ಷ, ಚಾಲಕ ವೃತ್ತಿ, ವಾಸ-ಕಂಕರ್ ವಾಡಿ ಗ್ರಾಮ ಪಿಂಡವಾರ (ತಾ), ಶಿರೋಯಿ ಜಿಲ್ಲೆ, ರಾಜಸ್ಥಾನ ರಾಜ್ಯ ಇವರನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ.
ಆರೋಪಿತರನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಆರೋಪಿತರ ಬಳಿ ಇದ್ದ ಕೃತ್ಯಕ್ಕೆ ಬಳಸಿದ ಕಾರ್ ಮತ್ತು ಆಯುಧಗಳನ್ನು ಹಾಗೂ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದ ಒಟ್ಟು 20,00,000 ರೂ. ಬೆಲೆ ಬಾಳುವ 17 ಕೆ.ಜಿ.690 ಗ್ರಾಂ ಬೆಳ್ಳಿ ಸಾಮಾನುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ್ ಕಾರ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿತರಲ್ಲಿ ಎ1 ಆರೋಪಿ ದಿನೇಶ್ ಕುಮಾರ್ ವಿರುದ್ದ ಗುಜರಾತ್ ರಾಜ್ಯದ ವಲ್ ಸಾಡ್ ಜಿಲ್ಲೆಯ ವಲ್ ಸಾಡ್ ನಗರ ಪೊಲೀಸ್ ಠಾಣೆಯಲ್ಲಿ ಕಳುವು ಪ್ರಕರಣ ದಾಖಲಾಗಿ ಘನ ನ್ಯಾಯಾಲಯದಲ್ಲಿ ದಿನಾಂಕ:25-10- 2024 ಶಿಕ್ಷೆಯಾಗಿರುತ್ತದೆ. ಈ ಪತ್ತೆ ಕಾರ್ಯದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್., ಪಿ.ಎಸ್.ಐ ಲತಾ.ಆರ್ ಹಾಗು ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ. ಸಂಗಮೇಶ್, ಗೌರಮ್ಮ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಮಚಂದ್ರ ಜಾಧವ್, ಸಿದ್ದಾರ್ಥ್, ರಮೇಶ್ ಹಾಗೂ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನ ಸಿಬ್ಬಂದಿ ಮಾರುತಿ, ಸೋಮಪ್ಪ ಮತ್ತು ಪ್ರಶಾಂತ್ ಅವರನ್ನು ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.