ದಾವಣಗೆರೆ: ಹಳೆ ಮನೆ ಕೆಡವಿದಾಗ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಕಡಿಮೆ ಬೆಲೆಗೆ 250 ಗ್ರಾಂ ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರಿಗೆ 5 ಲಕ್ಷ ವಂಚನೆ ಮಾಡಿದ ಘಟನೆ ಹದಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಿಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿಯ ರಂಗನಾಥ ಹಣ ಕಳೆದುಕೊಂಡವರು. ಸುರೇಶ್ ವಂಚನೆ ಮಾಡಿದ ಆರೋಪಿಯಾಗಿದ್ದಾನೆ. ಒಂದೂವರೆ ವರ್ಷದ ಹಿಂದೆ ಕೊರಟಿಗೆರೆಯಲ್ಲಿ ಸುರೇಶ್ ಗೆ ರಂಗನಾಥ ಪರಿಯವಾಟಗಿತ್ತು. ಆಗ ಮೊಬೈಲ್ ನಂಬರ್ ಬದಲಿಸಿಕೊಂಡಿದ್ದರು.
ಸುರೇಶ್, ತಮ್ಮ ಹಳೆ ಮನೆ ಕೆಡವಿದಾಗ ಚಿನ್ನದ ನಾಣ್ಯಗಳು ಸಿಕ್ಕಿದೆ. ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುತ್ತೇನೆ. ಆಸಕ್ತಿ ಇದ್ದರೆ ಖರೀದಿಸುವಂತೆ ರಂಗನಾಥಗೆ ಫೋನ್ ಮಾಡಿ ತಿಳಿಸಿದ್ದಾರೆ. ಜುಲೈ 23ರಂದು ಸಂತೆಬೆನ್ನೂರಿಗೆ ಕರೆಸಿಕೊಂಡು ಚಿನ್ನ ನಾಣ್ಯ ಪರೀಕ್ಷಿಸುವಂತೆ ಚಿನ್ನದ ನಾಣ್ಯವೊಂದನ್ನು ನೀಡಿದ್ದನು. ಪರೀಕ್ಷೆಗೆ ಅಸಲಿ ಚಿನ್ನ ಕೊಟ್ಟು ನಂಬಿಸಿದ್ದನು.
ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ನಂಬಿ ರಂಗನಾಥ್, ದಾವಣಗೆರೆ ತಾಲ್ಲೂಕಿನ ಕುರ್ಕಿ ಗ್ರಾಮದ ಹೊರವಲಯದಲ್ಲಿ ಭೇಟಿಯಾಗಿ 5 ಲಕ್ಷವನ್ನು ಸುರೇಶ್ ನೀಡಿದ್ದಾನೆ. ಹಣ ಪಡೆದ ನಂತರ ಗುಂಪೊಂದು ಹಲ್ಲೆ ಮಾಡಲು ಯತ್ನಿಸಿದನ್ನು ಕಂಡು ರಂಗನಾಥ್ ಭಯದಿಂದ ತಪ್ಪಿಸಿಕೊಂಡಿದ್ದಾನೆ. ಯತ್ನಿಸಿದರು. ಆಗ ಸುರೇಶ್ ಹಣದೊಂದಿಗೆ ಪರರಾರಿಯಾಗಿದ್ದಾನೆ ಎಂದು ರಂಗನಾಥ ದೂರಿನಲ್ಲಿ ಉಲ್ಲೇಖಿಸಿದ್ದಾನೆ.



